ಒರಿಗಾಮಿ ಮೂಲಕ ಗಣಿತ / Origaami Moolaka Ganitha
ಒರಿಗಾಮಿ ಮೂಲಕ ಗಣಿತ / Origaami Moolaka Ganitha Original price was: ₹180.Current price is: ₹162.
Back to products
ಮೋಜಿನ ಗಣಿತ / Mojina Ganitha
ಮೋಜಿನ ಗಣಿತ / Mojina Ganitha Original price was: ₹195.Current price is: ₹175.

ಧೀಮಂತರ ಸಾವು / Dheemantara Saavu

Author: Rahamath Tarikere

Pages: 216

Edition: 2025

Book Size: 1/8th Demmy

Binding: Paper Back

Publisher: Navakarnataka Prakashana

Specification

Original price was: ₹260.Current price is: ₹234.

In stock

Description

ಧೀಮಂತರ ಸಾವು / Dheemantara Saavu – ಧೀಮಂತರ ಸಾವು ಗುಣಸ್ವಭಾವ ಹಾಗೂ ಲೋಕದೃಷ್ಟಿಯ ನೆಲೆಯಿಂದ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವುದು ಕಷ್ಟವೆನಿಸುವಷ್ಟು ಇಲ್ಲಿರುವ ವ್ಯಕ್ತಿಗಳು ಬಹುರೂಪಿಗಳು. ಆದರೂ ಇವರಲ್ಲಿ ಸಾಕಷ್ಟು ಸಮಾನ ಅಂಶಗಳಿವೆ. ಹೆಚ್ಚಿನವರು ಮಾನವೀಯ ಮಿಡಿತವಿದ್ದವರು. ಸಾತ್ವಿಕ ಆಕ್ರೋಶ ತುಂಬಿಕೊಂಡಿದ್ದವರು. ಸಮಾನತೆಯ ಕನಸಿದ್ದವರು. ಆಸುಪಾಸಿನ ಸಮಾಜ ಬದಲಾಗಬೇಕೆಂದು ಚಡಪಡಿಸಿದವರು. ಬಿಕ್ಕಟ್ಟಿನ ಕಾಲದಲ್ಲಿ ತಮ್ಮೊಳಗಿದ್ದ ಕಸುವನ್ನು ಸುರಿದ ಕ್ರಿಯಾಶೀಲರು. ಧೀಮಂತರು. ಧೀಮಂತರ ಸಾವಿಗೆ ಯಾವತ್ತೂ ಪೂರ್ಣವಿರಾಮ ಇರುವುದಿಲ್ಲ. ಬಾಬಾಸಾಹೇಬರ ಚಿಂತನೆಗಳು ಅವರು ದೇಹಬಿಟ್ಟ ಅರ್ಧಶತಮಾನದ ಬಳಿಕ ಹೇಗೆ ದೇಶದ ಸಾಮಾಜಿಕ-ರಾಜಕೀಯ ಬದುಕನ್ನು ಬಿರುಗಾಳಿಯಂತೆ ಆವರಿಸಿಕೊಳ್ಳುತ್ತಿವೆ ಎಂಬುದಕ್ಕೆ ನಮ್ಮ ತಲೆಮಾರು ಸಾಕ್ಷಿಯಾಗಿದೆ. ಕೃತಿಯ ಲೇಖಕರಾದ ಡಾ॥ ರಹಮತ್ ತರೀಕೆರೆಯವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಮೂಡಿಸಿದ್ದಾರೆ. ಸಂಶೋಧನೆ, ಸಂಪಾದನೆ, ವಿಮರ್ಶೆ ಹಾಗೂ ಧರ್ಮ, ಸಂಸ್ಕೃತಿ, ಸಾಹಿತ್ಯ ಕ್ಷೇತ್ರಗಳಿಗೆ ಅವರು ನೀಡುತ್ತ ಬಂದಿರುವ ಕೊಡುಗೆ ವಿಶೇಷ ಮಹತ್ವದ್ದಾಗಿದೆ. ಪ್ರವಾಸ ಪ್ರಿಯರು ಕೂಡ. ಇವರಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಜೊತೆಗೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ.