ಭಾರತ ಕಥಾ / Bharatha Katha
ಭಾರತ ಕಥಾ / Bharatha Katha Original price was: ₹260.Current price is: ₹234.
Back to products

ನಂಬಿಕೆಯೆಂಬ ಗಾಳಿಕೊಡೆ / Nambikeyemba Galikode

Author: Dr Premalatha B

Pages:152

Edition: 2023

Book Size: 1/8th Demmy

Binding: Paper Back

Publisher: Veeraloka Books PVT .LTD.

Specification

Original price was: ₹180.Current price is: ₹162.

In stock

Description

ನಂಬಿಕೆಯೆಂಬ ಗಾಳಿಕೊಡೆ / Nambikeyemba Galikode  – ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ. ಹೊರಗಿದ್ದ ಕಂಭವೊಂದಕ್ಕೆ ಜೋರಾಗಿ.ಒದ್ದ. ಕಾಲಿಗೆ ನೋವಾಗಿ ಅವನ ಕರಿ ಶೂನ ಮೇಲೆ ಬಿಳಿ ಸುಣ್ಣದ ಬಣ್ಣ ಕಳಂಕದಂತೆ ಮೆತ್ತಿಕೊಂಡಿತು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ಅನುತ್ತೀರ್ಣನಾಗಿದ್ದರೂ ಪರವಾಗಿರಲಿಲ್ಲ ಆದರೆ ಸೊನ್ನೆ ತಗೊಂಡು ಫೇಲಾದ ವಿದ್ಯಾರ್ಥಿಯಂತೆ ಅವನ ದುಃಖ ನೂರ್ಮಡಿಸಿತು. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ರಿ-ಸಿಟ್‌ ಗೆ ಅವಕಾಶವಿದೆಯೇ? ಆಗಲೂ ಫೇಲಾದರೆ ಎಂದು ಭಯವಾಯಿತು. ಬಿರ-ಬಿರನೆ ಇನ್ನೂ ಸ್ವಲ್ಪ ದೂರ ನಡೆದುಹೋದ. ಸರಕ್ಕನೆ ತಿರುಗಿ ಕಟ್ಟಡದ ಹಿಂಭಾಗದಲ್ಲಿ ಮರೆಯಾದ. ಹೊಟ್ಟೆ ತೊಳಸಿ ಬಂದಂತಾಗಿ ವಾಂತಿ ಮಾಡುವಂತೆ ಬಗ್ಗಿ ನಿಂತ. ನನಗೇ ಯಾಕೆ ಹೀಗಾಯಿತು? ಏನು ತಪ್ಪು ಮಾಡಿದ್ದೆ? ಯಾಕೆ ದೇವರೇ? ವೈ? ಎನ್ನುವ ಪ್ರಶ್ನೆಗಳು ಮೂಡಿ ಅಳು ನುಗ್ಗಿ ಬಂತು. ಸದ್ದೇ ಮಾಡದಂತೆ ಅತ್ತು ಕಣ್ಣನ್ನು ಒರೆಸಿಕೊಂಡ.

ಕಥಾ ನಾಯಕನ ತೊಳಲಾಟಕ್ಕೆ ಕಾರಣವೇನು? ಅವನಿಗೆ ಪರಿಹಾರ ದೊರಕಿತೇ? ಇದನ್ನು ತಿಳಿಯಲು ಡಾ.ಪ್ರೇಮಲತ ಬಿ. ಇವರ ನಂಬಿಕೆಯೆಂಬ ಗಾಳಿಕೊಡೆ ಕಥಾಸಂಕಲನವನ್ನು ತಪ್ಪದೆ ಓದಿ ನೋಡಿ.