ನಿಜದ ಬೆಳಕಿನೆಡೆಗೆ ಒಂದು ಧ್ಯಾನ / Nijada Belakinedege Ondu Dhyana
Author: Dr.U.R.Ananthamurthy
Pages:108
Edition: 2018
Book Size: 1/8th Demmy
Binding: Paper Back
Publisher: Abhinava Prakashana
Description
ನಿಜದ ಬೆಳಕಿನೆಡೆಗೆ ಒಂದು ಧ್ಯಾನ / Nijada Belakinedege Ondu Dhyana -“ನಿಜದ ಬೆಳಕಿನೆಡೆಗೆ ಒಂದು ಧ್ಯಾನ” ಯು. ಆರ್. ಅನಂತಮೂರ್ತಿ ಅವರ ಚಿಂತನೆಗಳು ಮತ್ತು ವಿಮರ್ಶೆಗಳ ಸಂಕಲನವಾಗಿದೆ. ಇದು ವಿಭಿನ್ನ ಲೇಖನಗಳ ಸಂಗ್ರಹವಾಗಿದ್ದು, ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಅವರ ಆಳವಾದ ವಿಮರ್ಶೆಗಳನ್ನು ಒಳಗೊಂಡಿದೆ.
‘ನಿಜದ ಬೆಳಕಿನೆಡೆಗೆ ಒಂದು ಧ್ಯಾನ’ ಅನಂತಮೂರ್ತಿ ಅವರ ವಿಚಾರ – ವಿಮರ್ಶೆಗಳ ಸಂಕಲನ. ನಿಜದ ಬೆಳಕಿನೆಡೆಗೆ ಒಂದು ಧ್ಯಾನ, ಅಸಮಾನತೆ ಸೃಷ್ಟಿಸುವ ಜಾಣತನ, ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ, ಬೂಸಾ ಚಳವಳಿ- ಕಾಲು ಶತಮಾನ, ಕುಮಾರವ್ಯಾಸನ ಕೃಷ್ಣ-ಒಂದು ಪ್ರತಿಕ್ರಿಯೆ, ಲೋಹಿಯಾ ಜೊತೆ, ವರ್ತನೆಯ ಸಮಶ್ರುತಿ- ಎಚ್.ಜಿ. ಗೋವಿಂದೇಗೌಡರು, ನ್ಯಾಯಾಂಗದ ಮೂಲಕವೇ ಸತ್ಯ, ಲೋಕಯುತವನ್ನು ಜೀವಂತವಾಗಿಟ್ಟ ರಾಮದಾಸ್, ಹಾವು ಹುತ್ತದ ರೂಪಕ-ಬಂಗಾರಪ್ಪ ಒಂದು ನೆನಪು, ಜಗತ್ತನ್ನು ಕನ್ನಡದ ಮೂಲಕ ಬರಮಾಡಿಕೊಳ್ಳುವ ಮಾದರಿ, ಪ್ರೀತಿಯೇ ಈ ಕವಿಯ ಸ್ಥಾಯಿ, ಕೋಪ ಸಂಚಾರಿ, ವಿನಯದ ಈ ಭಾವನೆ, ನೋ ಮ್ಯಾನ್ಸ್ ಲ್ಯಾಂಡ್, ಇದು ನನ್ನದು ಆದರೂ ನನ್ನದಾಗಬೇಕಿದೆ, ಓಶೋ ಹೇಳುವ ಕಥಾಕ್ರಮ, ಲೇಹ್ ಜಾಯೇಂಗೆ , ಕೆ.ಎಸ್, ಪೂರ್ಣಿಮಾ ಅವರ ಕಾಲದೆಲೆಯ ಮೇಲೆ, ಮತ್ತು ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಮಂಗನ ಬ್ಯಾಟಿ ವಿಮರ್ಶಾ ಲೇಖನಗಳಿವೆ.
