ನೆಟ್ ನೋಟ / Net Nota
Author:Sudhindra Haldodderi
Pages:160
Edition: 2021
Book Size: 1/8th Demmy
Binding: Paper Back
Publisher: Sawanna Publication
Description
ನೆಟ್ ನೋಟ / Net Nota -ಜೊತೆಗಿರದ ಜೀವ ಎಂದಿಗಿಂತ ಹೆಚ್ಚು ಜೀವಂತ ಎಂಬ ಮಾತಿದೆ.. ನಾಡಿನ ಶ್ರೇಷ್ಠ ವಿಜ್ಞಾನಿಗಳೂ, ವಿಜ್ಞಾನ ಲೇಖಕರೂ ಆದ ಶ್ರೀ ಸುಧೀಂದ್ರ ಹಾಲ್ದೊಡ್ಡೇರಿ ಅವರ ವಿಷಯದಲ್ಲಿ ಸತ್ಯವೇ ಹೌದು..
ಅವರು ತಮ್ಮ ಸಾವಿರಾರು ಲೇಖನಗಳ ಮೂಲಕ, ಮೊನ್ನೆ #ಸಾವಣ್ಣ_ವಾರ್ಷಿಕೋತ್ಸವ’ದಲ್ಲಿ ಬಿಡುಗಡೆಯಾದ ಪುಸ್ತಕದ ಮೂಲಕ, ಇಹಲೋಕ ತ್ಯಜಿಸಿದ ನಂತರವೂ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅರ್ಪಿಸಿಕೊಂಡ ದೇಹದ ಮೂಲಕ ನಮ್ಮೊಂದಿಗೆ ಸದಾ ಇರುತ್ತಾರೆ
ಅವರು ಬರೆದ ‘ನೆಟ್ ನೋಟ’ ಎಂಬ ವೈಜ್ಞಾನಿಕ ಅಂಕಣಗಳ ಪುಸ್ತಕ #ಸಾವಣ್ಣ_ವಾರ್ಷಿಕೋತ್ಸವ’ದ ಸಂದರ್ಭದಲ್ಲಿ ಶ್ರೀ Jogi Girish Rao Hatwar ಶ್ರೀ Someswara Narappa ಅವರಿಂದ ಬಿಡುಗಡೆ ಆಯಿತು, ಜೊತೆಗೆ ಅವರ ಮಗಳು ಮೇಘನಾ ಅವರ ಪುಸ್ತಕವೂ ಬಿಡುಗಡೆ ಆಗಿರುವುದು ವಿಶೇಷ.. ಅಪ್ಪ-ಮಗಳ ಪುಸ್ತಕಗಳನ್ನು ಒಟ್ಟಿಗೆ ನೋಡುವಾಗ, ಅಕ್ಷರಗಳ ಮೂಲಕ ಅವರು ನಮ್ಮೊಂದಿಗೆ ಇದ್ದಾರೆ ಎಂಬುದು ಇನ್ನಷ್ಟು ದಟ್ಟವಾಗುತ್ತದೆ.
