ಪ್ರೀತಿ ಪ್ರಣಯ ಪುಕಾರು / Preethi Pranaya Pukaru
Author:Vaishali Hegade
Pages:112
Edition: 2021
Book Size: 1/8th Deemy
Binding: Paper Back
Publisher:Dharani Prakashana
Description
ಪ್ರೀತಿ ಪ್ರಣಯ ಪುಕಾರು / Preethi Pranaya Pukaru -‘ಪ್ರೀತಿ ಪ್ರಣಯ ಪುಕಾರು’ ಕೃತಿಯು ವೈಶಾಲಿ ಹೆಗಡೆ ಅವರ ಸಣ್ಣಕತೆಗಳ ಸಂಕಲನ. ಮುಗ್ಧತೆ ಕೂಡ ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು ‘ಪ್ರೀತಿ, ಪ್ರಣಯ ಪುಕಾರು’ ಎಂಬ ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. ಆತ್ಮಸಂಗಾತಕ್ಕೆ ಕಾರಣ ಕೇಳಬೇಕಿಲ್ಲ. ಸಾಂಗತ್ಯ, ಪ್ರೀತಿ, ಆಕಾರಣವಾದದ್ದು ದಾಂಪತ್ಯದಲ್ಲಿ ದ್ವೇಷಿಸಲು ನಮ್ಮ ಸಮಾಜ ನಮಗೆ ಪಾರದರ್ಶಕ ಕಾರಣಗಳನ್ನು ಕಟ್ಟಿಕೊಡುತ್ತದೆ. ಆದರೆ ಪ್ರೀತಿಸುವುದನ್ನು ತಾವೇ ಕಲಿತುಕೊಳ್ಳಬೇಕು. ಮೈ ಮತ್ತು ಮನಸ್ಸಿನ ಅವಶ್ಯಕತೆಗಳನ್ನು ಬೇರೆ ಬೇರೆ ಎಂದು ಭಾವಿಸುವ ಮತ್ತು ಈ ರೀತಿ ಬಾಳುವುದರಿಂದ ಪರಸ್ಪರರಿಗೆ ಆಗುವ ಸುಖ-ದುಃಖಗಳ ಪರಿಕಲ್ಪನೆಯನ್ನು ಅವರದೇ ರೀತಿಯಲ್ಲಿ ಪರಿಭಾವಿಸಿಕೊಂಡು, ಆದಕ್ಕೆ ತಕ್ಕನಾಗಿ ಬಾಳುವ ಮುಗ್ಧ ದಂಪತಿಯ ಕತೆ ಇದು. ಪಾತ್ರಗಳ ಮುಗ್ಧತೆ ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಮೂಡಿದೆ. ಕೆಂಡಸಂಪಿಗೆ”, ’ಕನಸುಗಳು ಮಾರಾಟಕ್ಕಿವೆ’’ ಈ ಕೃತಿಯಲ್ಲಿನ ಮುಖ್ಯ ಕತೆಗಳಾಗಿವೆ.
