ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ / Preeti Prema :Pustkadacheya Badanekayi
Author:Poornima Malagimani
Pages:176
Edition: 2022
Book Size: 1/8th Demmy
Binding: Paper Back
Publisher: Sawanna Publication
Description
ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ / Preeti Prema :Pustkadacheya Badanekayi – ಪೂರ್ಣಿಮಾ ಮಾಳಗಿಮನಿ ಅವರ ಕಾದಂಬರಿ ‘ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ’. ಕಾಲಡಿಯ ಕಡಲಂಚು ಕುಸಿಯುವಾಗಲೂ ಕೊಡುವ ಕಚಗುಳಿ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ ಒಂದು ಗುಪ್ತ ಪ್ರೇಮ, ಮತ್ತೊಂದು ಭಗ್ನ ಪ್ರೇಮ, ಮುಗಿಯದ ಹುಡುಕಾಟತೀವ್ರ ಹಂಬಲ, ಪ್ರಾಮಾಣಿಕತೆಯ ಬಲೂನು ಒಡೆಯುವ ಕ್ಷಣ, ಅನುಕಂಪದ ಅಕ್ಕರೆ, ಹತ್ತಾರು ವರ್ಷ ಹಿಂದಕ್ಕೆ ಜಿಗಿಯಲೆತ್ನಿಸುವ ರಾಗೋದ್ರೇಕ, ವರ್ತಮಾನದಿಮದ ಪಾರಗಲು ಪ್ರೇಮದ ಮೊರೆ ಹೋಗುವ ಜೀವ – ಹೀಗೆ ಈ ಕಾದಂಬರಿಯಲ್ಲಿ ಏನೆಲ್ಲ ಇದೆ. ಪರಸ್ಪರ ಸಂಬಮಧವಿಲ್ಲದ ಸಂಗತಿಗಳನ್ನು ಪೂರ್ಣಿಮಾ ಅತ್ಯಪೂರ್ವ ವಿನ್ಯಾಸದಲ್ಲಿ ಜೋಡಿಸಿದ್ದಾರೆ.ಇದೊಂದು ಕೊಲಾಜ್ ಮಾದರಿಯ ಕೃತಿ ಎಂಬುದಾಗಿ ಹೇಳಿದ್ದಾರೆ.
