ಫೆರಾರಿ ಮಾರಿದ ಫಕೀರಾ / Ferrari Maarida Fhakira
Author: Robin Sharma
Pages:161
Edition: 2025
Book Size: 1/8th Demmy
Binding: Paper Back
Publisher: Jaico Publication
Description
ಫೆರಾರಿ ಮಾರಿದ ಫಕೀರಾ / Ferari Maarida Phakira -ಪುಸ್ತಕ ಓದುವುದರಿಂದ ಏನು ಪ್ರಯೋಜನ ಎನ್ನುವವರು
ಒಮ್ಮೆಯಾದರೂ ‘ಫೆರಾರಿ ಮಾರಿದ ಫಕೀರ’ ಪುಸ್ತಕ ಓದಲೇಬೇಕು. ಪುಸ್ತಕಗಳು ಏನನ್ನು ಮಾಡುತ್ತವೆ? ಎಂದು ಕೇಳುಗರು ಹಲವರಿದ್ದಾರೆ. ಆದರೆ ಒಂದು ಪುಸ್ತಕ ನಮ್ಮನ್ನು ಬದಲಾವಣೆಯ ಹೊಸ ಹಾದಿಯಲ್ಲಿ ನಡೆಸುತ್ತದೆ. ಎಷ್ಟೋ ಸಂದರ್ಭದಲ್ಲಿ ನಮ್ಮನ್ನು ಸಮಾಧಾನಿಸುತ್ತದೆ, ನಗಿಸುತ್ತದೆ, ಜೀವನಪಾಠ ಬೋಧಿಸುತ್ತದೆ ಹೀಗೆ ಹೇಳುತ್ತಾ ಹೋದರೆ ಅದರ ಪಟ್ಟಿ ದೊಡ್ಡದಾಗುತ್ತಲೇ ಸಾಗುತ್ತದೆ. ಒಬ್ಬ ಗುರುವಿನ ಸ್ಥಾನವನ್ನು, ಒಬ್ಬ ಗೆಳೆಯನ ಸ್ಥಾನವನ್ನು, ಒಬ್ಬ ಮಾರ್ಗದರ್ಶಕನ ಸ್ಥಾನವನ್ನು ಒಂದೊಳ್ಳೆ ಪುಸ್ತಕ ತುಂಬುತ್ತದೆ. ಅಂತಹ ಪುಸ್ತಕಗಳ ಸಾಲಿನಲ್ಲಿ ಮೊದಲಿದೆ ‘ಫೆರಾರಿ ಮಾರಿದ ಫಕೀರ್’ ನಿಲ್ಲುತ್ತದೆ ಎಂದು ಹೇಳಬಲ್ಲೆ.ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಹಾಯಕಾರಿಯಾಗುವ ಅತ್ಯದ್ಭುತ ಪುಸ್ತಕ ಇದಾಗಿದೆ.
ಮನುಷ್ಯ ತನ್ನ ಬದುಕಿನಲ್ಲಿ ಎಷ್ಟೆಲ್ಲ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾನೆ, ಎಷ್ಟೆಲ್ಲ ಭಾರಹೊತ್ತು ಒತ್ತಡಕ್ಕೆ ಒಳಗಾಗಗುತ್ತಾನೆ, ನೋವುಗಳಿಂದ ಜರ್ಜರಿತಗೊಳ್ಳುತ್ತಾನೆ, ಸುಖವೆಂಬ ಓಡುವ ಕುದುರೆಯ ಬೆನ್ನತ್ತಿ ತಿರುಗುತ್ತಾನೆ, ಕಷ್ಟಗಳು ನನಗೆ ಇವೆ ಎಂದು ಕೊರಗುತ್ತಾನೆ, ನನ್ನಿಂದ ಈ ಕೆಲಸ ಆಗದು ಎಂದು ಕೂರುತ್ತಾನೆ, ಕೋಪವನ್ನು ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಾನೆ, ಹಣವೇ ಎಲ್ಲದಕ್ಕೂ ಮೂಲವೆಂದು ಹಣಗಳಿಕೆಯಲ್ಲಿ ಮೈಮರೆಯುತ್ತಾನೆ, ಕನಸುಗಳೇ ಇಲ್ಲದೆ ಬಾಳುತ್ತಾನೆ ಹೀಗೆ ಇನ್ನು ಬದುಕಿನ ಪ್ರತಿ ಘಳಿಗೆಯಲ್ಲೂ ಮನುಷ್ಯ ಅನುಭವಿಸು ಸಂಕಟಗಳಿಗೆ, ದುಃಖದ ಆಲೋಚನೆಗಳಿಗೆ ಮುಕ್ತಿ ನೀಡಿ ಸುಂದರ ಬದುಕಿನ ನಿರ್ಮಾಣಕ್ಕೆ ಆತ್ಮ-ದೇಹ-ಮನಸ್ಸು ಈ ಮೂರನ್ನು ಹೇಗ ಸಮತೋಲನದಿಂದ ಕಾಪಾಡಿಕೊಂಡು ಆತ್ಮಸಂತೋಷದ ಉಜ್ವಲ ಬದುಕನ್ನು ಸಾಗಿಸುವುದು ಹೇಗೆ ಎಂಬುದನ್ನು ತಿಳಿಸುವ ವ್ಯಕ್ಯಿತ್ವ ವಿಕಸನದ ಪುಸ್ತಕ ಇದಾಗಿದೆ.
