ಬದುಕು ಬದಲಿಸಿದ ಭಾವೇಶ್ ಭಾಟಿಯಾ / Baduku Badalisida Bhavesh Bhatia
Author: Nemichandra
Pages:268
Edition: 2021
Book Size: 1/8th Demmy
Binding: Paper Back
Publisher: Navakarnatka Publication
Description
ಬದುಕು ಬದಲಿಸಿದ ಭಾವೇಶ್ ಭಾಟಿಯಾ / Baduku Badalisida Bhavesh Bhatia – ಖ್ಯಾತ ಲೇಖಕಿ ನೇಮಿಚಂದ್ರ ಅವರ ಕೃತಿ -ಬದುಕು ಬದಲಿಸಿದ ಭಾವೇಶ್ ಭಾಟಿಯಾ. ಅಂಧ ಉದ್ಯೋಗ ಜನಕನ ಸಾಹಸಗಾಥೆ ಎಂಬುದು ಈ ಕೃತಿಯ ಉಪಶೀರ್ಷಿಕೆಯಾಗಿ ಓದುಗರ ಗಮನ ಸೆಳೆಯುತ್ತದೆ. ಭಾವೇಶ್ ಚಂದುಭಾಯ್ ಭಾಟಿಯಾ ಅವರು ಡಾ. ಭಾವೇಶ್ ಭಾಟಿಯಾ’ ಎಂದೇ ಪ್ರಸಿದ್ಧಿ. ಸನ್ ರೈಸ್ ಕ್ಯಾಂಡಲ್ಸ್ ಎಂಬ ಸಂಸ್ಥೆ ಸ್ಥಾಪಿಸುವ ಮೂಲಕ ಅಂಧರ ಬಾಳಿಗೆ ಬೆಳಕಾದವರು. ತಾವು ಅಂಧರಿದ್ದೂ ಇತರರಿಗೆ ಉದ್ಯೋಗಗಳ ಅವಕಾಶವನ್ನು ಸೃಷ್ಟಿಸಿದವರು. 50 ವರ್ಷದ ಭಾವೇಶ್ ಭಾಟಿಯಾ ಅವರಿಗೆ ರಾಷ್ಟ್ರಾಧ್ಯಕ್ಷರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಮಹಾರಾಷ್ಟ್ರದ ಮಹಾಬಲೇಶ್ವರ ಮೂಲದ ಡಾ. ಭಾವೇಶ್ ಭಾಟಿಯಾ, ಅಂಧರಿಂದಲೇ ಮೇಣದ ಬತ್ತಿಗಳನ್ನು ತಯಾರಿಸಿ, ಅದರ ಆದಾಯದಿಂದ ಸಂಸ್ಥೆ ನಡೆಸುವುದು ಹಾಗೂ ಸಮಾಜ ಸೇವೆಯಲ್ಲಿ ತೊಡಗಿರುವ ಅವರ ಮನೋಸ್ಥೈರ್ಯದ ಬದುಕನ್ನು ಕಟ್ಟಿಕೊಡುವ ಕೃತಿ ಇದು.
