ಬಯಲು / Bayalu
Author:Praveen Kumar G
Pages:110
Edition: 2025
Book Size: 1/8th Deemy
Binding: Paper Back
Publisher:Olavu Bareha Prakashana
Description
ಬಯಲು / Bayalu – ಪ್ರವೀಣ್ ಕುಮಾರ್ ಜಿ ಅವರ ಕಥಾಸಂಕಲನವಾಗಿದ್ದು, ಇಲ್ಲಿ ಹತ್ತು ಕಥೆಗಳಿವೆ. ಎಲ್ಲಾ ಕತೆಗಳು ಕೂಡ ಇವತ್ತಿನ ಕಾಲವನ್ನು ಪ್ರತಿನಿಧಿಸುತ್ತವೆ. ಹೆಣ್ಣುತನದ ಬೇರೊಂದು ಪ್ರಪಂಚವನ್ನು ಇಲ್ಲಿ ಕಟ್ಟಿ ಕೊಟ್ಟಿದ್ದು, ಹೆಣ್ಣೆಂದರೆ ಹೀಗೆಯೇ ಎಂದುಕೊಳ್ಳುವವರಿಗೆ ದಿಟವಾಗಿಯೂ ಇರಬಲ್ಲ ಹೆಣ್ಣುಗಳ ಇನ್ನೊಂದು ಮುಖವನ್ನು ಕತೆಗಾರ ತಮ್ಮ ಕತೆಗಳಲ್ಲಿ ಕಾಣಿಸುತ್ತಿದ್ದಾರೆ. ಬಯಲು ಎನ್ನುವ ಈ ಸಂಕಲನದಲ್ಲಿ ಬಯಲು ಅನ್ನುವ ಒಂದು ಕತೆ ಇದೆ. ಆದರೆ ಆ ಹೆಸರು ಅದಕ್ಕೊಂದೇ ಮೀಸಲಾಗಿಲ್ಲ. ಇಲ್ಲಿನ ಎಲ್ಲಾ ಕತೆಗಳಲ್ಲಿ ತೆರೆದುಕೊಳ್ಳುವ ಒಂದು ಪ್ರಕ್ರಿಯೆ ಇದೆ, ಆ ತೆರೆದುಕೊಳ್ಳುವಿಕೆ ಮನುಷ್ಯರಿಗೆ, ಸಂಬಂಧಗಳಿಗೆ ಮತ್ತು ಸಮಾಜಕ್ಕೆ. ವಚನವೊಂದು ಹೇಳುವ ಬಯಲಾಗುವ ಪರಿ ಅನ್ನು ಇಲ್ಲಿ ಕಾಣಬಹುದು. ಕೃತಿಯ ಕುರಿತು ಕತೆಗಾರ ಕೇಶವ ಮಳಗಿ, ನಾಗರೀಕತೆಯ ಹುಟ್ಟಿನಿಂದಲೇ ಕತೆಗಳು ನಮ್ಮೊಂದಿಗೆ ಬಂದಿವೆ. ನಮ್ಮ ಮತ್ತು ನಮ್ಮ ಕಾಲದ ಮನುಷ್ಯನಿಗೆ ಸಾಧ್ಯವಿರುವ ಎಲ್ಲಾ ದಶರಸಗಳು, ಇಲ್ಲಿ ನವರಸಗಳ ಜೊತೆಗೆ ಭಕ್ತಿ ಎಂಬ ಇನ್ನೊಂದು ರಸವೂ ಸೇರಿ ದಶರಸಗಳ ಅನುಭವಗಳನ್ನು ಹೇಳುವುದೇ ಕತೆ ಅಥವಾ ಸಾಹಿತ್ಯ ಎಂಬುದು ನನ್ನ ಅನಿಸಿಕೆ. ಪ್ರವೀಣ್ ಅವರ ಇಲ್ಲಿನ ಕತೆಗಳಲ್ಲಿ ಆ ಎಲ್ಲಾ ದಶರಸಗಳು ಸೇರಿವೆ. ಪ್ರವೀಣ್ ಅವರು ಸಿನಿಮಾಗಳಲ್ಲಿಯೂ ತೊಡಗಿರುವುದರಿಂದ ಇವರ ಕತೆಗಳಲ್ಲಿ ಸಿನಿಮೀಯ ಅಂಶಗಳು ಕೂಡ ಇವೆ ಎಂದಿದ್ದಾರೆ
