ಅಸ್ಪೃಶ್ಯ / Asprushya
ಅಸ್ಪೃಶ್ಯ / Asprushya Original price was: ₹170.Current price is: ₹153.
Back to products
ವಡ್ಡಾರಾಧನ ಕಥಾಲೋಕ / Vaddaradhana Kathaloka
ವಡ್ಡಾರಾಧನ ಕಥಾಲೋಕ / Vaddaradhana Kathaloka Original price was: ₹175.Current price is: ₹158.

ಬೆಳುದಿಂಗಳ ನೋಡಾ / Beludingala Noda

Author: S.R Vijayashankar

Pages: 240

Edition: 2020

Book Size: 1/8th Demmy

Binding: Paper Back

Publisher: Chintana Chittara

Original price was: ₹240.Current price is: ₹216.

In stock

Description

ಬೆಳುದಿಂಗಳ ನೋಡಾ ವಿಮರ್ಶಾ ಪ್ರಬಂಧಗಳು / Beludingala Noda Vimarsha Prabandhagalu – ಹಿರಿಯ ಸಾಹಿತಿ-ವಿಮರ್ಶಕ ಡಾ. ಎಸ್‌. ಆರ್. ವಿಜಯಶಂಕರ ಅವರ ʼಬೆಳುದಿಂಗಳ ನೋಡಾʼ ಕೃತಿಯು ಒಂದು ವಿಮರ್ಶಾ ಪ್ರಬಂಧ ಕೃತಿಯಾಗಿದೆ. ಬೇಂದ್ರೆಯವರ ʼಬೆಳುದಿಂಗಳ ನೋಡಾʼ ಪದ್ಯದ ಸವಿಸ್ತೃತ ಸುದೀರ್ಘ, ಆಳವಾದ ನೋಟ ಇಲ್ಲಿ ಸಿಗುತ್ತದೆ. ಈ ಕೃತಿ ಓದಿದೊಡನೆ ಒಂದು ಬಾರಿ ರೋಮಾಂಚನವಾಯಿತು ಎನ್ನುತ್ತಾರೆ ಸಾಹಿತಿ ಡಾ ಡಿ. ಸಿ ಗೀತಾ. ಭೌತಿಕ ಶರೀರ ಬೆಂಕಿಯ ಮೂಲಕ ಬೆಳಕಿಗೆ ಸೇರುವ ಪ್ರಕ್ರಿಯೆ ಲೇಖಕರಲ್ಲಿ ಆಧ್ಯಾತ್ಮಿಕ ಲಹರಿಗಳನ್ನು ಉಂಟು ಮಾಡುವುದನ್ನು ನಾವು ಇಲ್ಲಿ ಕಾಣಬಹುದು.

ಬೆನ್ನುಡಿ ಬರೆದಿರುವ ಜಿ.ಕೆ ರವೀಂದ್ರ ಕುಮಾರ್‌ ಅವರು “ ಬೆಳುದಿಂಗಳ ಬಿಳಿ ಬೆಳಕು ನೆಲ ಆಕಾಶಗಳನ್ನು ಒಂದು ಮಾಡಿದ ಭಾವ ಅಗಮ್ಯವಾಗಿ ಕಂಡಿತು. ಸುತ್ತಲಿನ ಮರ ಗಿಡಗಳಿಂದ ಎಚ್ಚೆತ್ತ ಹಕ್ಕಿಗಳ ದನಿ, ಕೆಂಪಾಗಿ‌ ಮೇಲೆದ್ದ ಚಿತೆಯ ಬೆಂಕಿಯು ಕ್ರಮೇಣ ತನ್ನ ಕೆಂಬಣ್ಣವನ್ನು ಕಳಕೊಂಡು, ಆಕಾಶದ ಬಿಳಿಗೆ ಸೇರುತ್ತಿತ್ತು.ಇಲ್ಲಿ ಆ ಪರಿವರ್ತನೆಯ ಕುರಿತು ಲೇಖಕ ಸೊಗಸಾಗಿ ವಿವರಿಸಿದ್ದು, ಈ ಕವನಕ್ಕೊಂದು ಬೆಳಕಿನ ಶ್ರುತಿ ಇದೆ ಎಂದು ಹೇಳುತ್ತಾರೆ. ಒಟ್ಟಾರೆ, ಈ ಕೃತಿಯು ಬೇಂದ್ರೆಯವರ ಕವನವನ್ನು ಮತ್ತೊಮ್ಮೆ ನೆನಪಿಸುವಂತಿದೆ.