ಬೆಸ್ತರ ಕರಿಯ / Bestara Kariya
Author: Dr. Goruru Ramaswamy Iyengar
Pages: 126
Edition: 2022
Book Size: 1/8th Demmy
Binding: Paper Back
Publisher: IBH Prakashana
Specification
Description
ಬೆಸ್ತರ ಕರಿಯ / Bestara Kariya – ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಚಿತ್ರಗಳು ಮತ್ತು ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಸಾಮಾನ್ಯ ಜನರನ್ನು ತಮ್ಮ ರಚನೆಯ ವಸ್ತುವನ್ನಾಗಿ ಆರಿಸಿಕೊಂಡರೂ ಅವರಲ್ಲಿಯೂ ಉತ್ತಮ ಗುಣಗಳನ್ನು ಕಂಡು ಹೇಳುವ ಶಕ್ತಿಯುವಳ್ಳವರು ಗೋರೂರು ರಾಮಸ್ವಾಮಿ ಅವರು. ಈ ಕೃತಿಯು ಮೊದಲನೇ ಮುದ್ರಣವನ್ನು 1947, ಎರಡನೇ ಮುದ್ರಣ 1952, ಮೂರನೇ ಮುದ್ರಣವನ್ನು 1970, ಪ್ರಸ್ತುತ ನಾಲ್ಕನೇ ಮುದ್ರಣವನ್ನು ಕಂಡಿದೆ. ಇಲ್ಲಿನ ಕತೆಗಳು ಪ್ರತಿಯೊಬ್ಬಬ ವ್ಯಕ್ತಿಯ ಜೀವನವನ್ನು ತಿಳಿಸುತ್ತದೆ. ನಾಗರಿಕರು ಶುಷ್ಕವೆಂದು ಭಾವಿಸುವ ಜನಪದ ಜೀವನದಲ್ಲಿ ಎಂತಹ ಸ್ವಾರಸ್ಯವಿದೆ, ಚೆಲುವಿದೆ ಎಂಬುದನ್ನು, ಸಾಮಾನ್ಯ ಜನ ಎಂತಹ ರಸಿಕರೆಂಬುದನ್ನು ಗೊರೂರರು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿದ್ದಾರೆ. ದೈನಂದಿನ ಬದುಕಿನ ಸಾಮಾನ್ಯ ಘಟನೆಗಳಲ್ಲಿ ಮತ್ತು ಸಂಗತಿಗಳಲ್ಲಿ ಹುದುಗಿರುವ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಅವರು ಎಲ್ಲವನ್ನೂ, ಎಲ್ಲರನ್ನೂ ಅವಲೋಕಿಸುವುದು ಹಾಸ್ಯ ಕಣ್ಣಿನಿಂದ ಎಂಬುದನ್ನು ಇಲ್ಲಿ ಕಾಣಬಹುದು.
