ಗದಾಯುದ್ದಂ / Gadayuddam
ಗದಾಯುದ್ದಂ / Gadayuddam Original price was: ₹350.Current price is: ₹315.
Back to products
ಮಿಸ್ಸಿನ ಡೈರಿ / Missina Diary
ಮಿಸ್ಸಿನ ಡೈರಿ / Missina Diary Original price was: ₹200.Current price is: ₹180.

ಭಾನುಮತಿಯ ಪರಿವಾರ / Bhanumatiya Parivaara

Author:Kumaraswamy Tekkunja

Pages:120

Edition: 2023

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹140.Current price is: ₹126.

In stock

Description

ಭಾನುಮತಿಯ ಪರಿವಾರ / Bhanumatiya Parivaara -‘ಭಾನುಮತಿಯ ಪರಿವಾರ’ ಕುಮಾರಸ್ವಾಮಿ ತೆಕ್ಕುಂಜ ಅವರು ರಚಿಸಿರುವ ಕಾದಂಬರಿ. ಕೃತಿಯ ಕುರಿತು ತಿಳಿಸುತ್ತಾ ‘ರಾವಣ ಪತ್ನಿಯ ಕುರಿತಾದ “ಮಂಡೋದರಿ” ಕಾದಂಬರಿಯನ್ನು ಬರೆದ ನನಗೆ ದುರ್ಯೋಧನ ಪತ್ನಿ ಭಾನುಮತಿಯ ಕುರಿತು ಬರೆಯಬೇಕೆಂಬ ಯೋಚನೆ ಸಹಜವಾಗಿಯೇ ಉಂಟಾಗಿತ್ತು. ಅದರ ಪರಿಣಾಮವೇ ಈ ಕೃತಿ “ಭಾನುಮತಿಯ ಪರಿವಾರ” ಎಂದಿದ್ದಾರೆ ಕುಮಾರಸ್ವಾಮಿ ತೆಕ್ಕುಂಜ. ಹಾಗೇ ಮಹಾಭಾರತ ಕೃತಿಯಲ್ಲಿ ಎಲ್ಲಿಯೂ ಭಾನುಮತಿ ಪ್ರಸ್ತಾಪ ಬಂದಂತೆ ಕಾಣುವುದಿಲ್ಲ. ಪಂಪ ಭಾರತದ “ಭಾನುಮತಿಯ ನೆತ್ತ ಪ್ರಸಂಗವು ತುಂಬ ವಿಮರ್ಶೆಗೊಳಪಟ್ಟ ಪದ್ಯ. ಕಡೆಂಗೋಡ್ಲು ಶಂಕರ ಘೋಷಯಾತ್ರೆಯಲ್ಲಿಯೂ ಭಾನುಮತಿಯ ಚಿತ್ರಣ ಸಿಗುತ್ತದೆ. ಭಾನುಮತಿ ಸ್ವಯಂವರ ಎಂಬ ಯಕ್ಷಗಾನ ಪ್ರಸಂಗ ಇದೆಯಾದರೂ ಅದು ಅಷ್ಟು ಪ್ರಚಾರಕ್ಕೆ ಬರಲಿಲ್ಲ. ಕೆಲವು ಬಿಡಿ ಲೇಖನಗಳು ಅಪರೂಪಕ್ಕೊಮ್ಮೆ ಪ್ರಕಟವಾದದ್ದಿದೆ. ಇವಿಷ್ಟು ಹೊರತು ಪಡಿಸಿದರೆ ಕನ್ನಡದಲ್ಲಿ ಭಾನುಮತಿಯ ಕುರಿತಾದ ಸಾಹಿತ್ಯ. ವಿರಳವೆಂದೇ ಹೇಳಬಹುದು. ಹಾಗಾಗಿ “ಭಾನುಮತಿ ಪರಿವಾರ, ಕಾದಂಬರಿ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಒಂದು ಅಪರೂಪದ ಕೃತಿಯೆಂದೇ ಹೇಳಬಹುದು.