ಮಗಳಿಗೆ ಅಪ್ಪ ಬರೆದ ಪತ್ರಗಳು / Magalige Appa Bareda Patragalu
Author:Jawaharlal Nehru
Pages:134
Edition: 2025
Book Size: 1/8th Deemy
Binding: Paper Back
Publisher:Ruthumana Prakashana
Description
ಮಗಳಿಗೆ ಅಪ್ಪ ಬರೆದ ಪತ್ರಗಳು / Magalige Appa Bareda Patragalu -ಜವಾಹರಲಾಲ ನೆಹರೂ ಮಗಳು ಇಂದಿರೆಗೆ ಬರೆದ ಜಗತ್ತಿನ ಪ್ರಾಚೀನ ಕಾಲದ ಸಂಕ್ಷಿಪ್ತ ವೃತ್ತಾಂತಗಳು. ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿ ವ್ಯಸ್ತವಾಗಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರೀಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು. 1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂವಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ನಾವು ಕಾಣಬಹುದು.
