ಮರವೇ ಮರ್ಮರವೇ / Marave Marmarave
Author: Dr. Chendrashekhara Kambara
Pages: 160
Edition: 2017
Book Size: 1/8th Demmy
Binding: Paper Back
Publisher: Ankita Pustaka
Description
ಮರವೇ ಮರ್ಮರವೇ / Marave Marmarave – ಜಾನಪದವೆಂಬುದು ಒಂದು ಸಂಸ್ಕೃತಿಯು ಮುಗಿದು ಪೂರ್ತಿಯಾದ ಅವಸ್ಥೆಯಲ್ಲ. ಜೀವಂತವಾಗಿರುವ ಅವಸ್ಥೆ. ಒಬ್ಬ ಜನಪದ ಕಲಾವಿದ ಏಕಕಾಲದಲ್ಲಿ ಹಾಡು ಹೇಳುತ್ತಿದ್ದಾನೆಂದರೆ ಆತ ಎರಡು ಕೆಲಸ ಮಾಡುತ್ತಿರುತ್ತಾನೆ. ಒಂದು, ಹಾಡುತ್ತಾ ಹಾಡಿನ ಪರಂಪರೆಯನ್ನು ಉಳಿಸುವ ಕೆಲಸ ಮಾಡುವುದು. ಎರಡನೆಯದು ಅದೇ ಕಾಲಕ್ಕೆ ಹಿಂದಿನವರ ಹೊಸ ಅಂಶಗಳನ್ನು ಸೃಷ್ಟಿಸುವ ಕೆಲಸ ಎಂದು ಕಂಬಾರರು ಹೇಳುತ್ತಾರೆ. ಕಾವ್ಯ ಎಂದರೆ ಹಾಡುವುದೇ ಎಂದು ತಿಳಿದು ತಾವು ಸೃಷ್ಟಿಸಿದ್ದನ್ನು ಜೀವಂತ ಸ್ವರೂಪದಲ್ಲಿಡಲು ಕಂಬಾರರು ನಿರಂತರವಾಗಿ ಪ್ರಯತ್ನಿಸಿದವರು. ಹೀಗೆ ಜಾನಪದ ಮೂಲ ಸಂಗತಿಗಳನ್ನು ತಮ್ಮ ಮನೋವಲಯಕ್ಕೆ ತಂದುಕೊಂಡು ಅದಕ್ಕೆ ಬೇರೆಯದೇ ರೂಪ ಕೊಟ್ಟು, ಅದನ್ನು ಕೇಳುಗರು ಮತ್ತು ಪ್ರೇಕ್ಷಕ ವರ್ಗದ ಮುಂದೆ ಇಟ್ಟವರಲ್ಲಿ ಕಂಬಾರರು ಮೊದಲಿಗರು. ಈ ದೃಷ್ಟಿಯಿಂದ ಇವರು ಜಾನಪದ ಚಿಂತನೆ ಮತ್ತು ಸಂಗ್ರಹ ಜಗತ್ತಿನ ಹರಿಕಾರರು.
