ಕಾಮಿನೀ ತಲ್ಪ / Kamini Talpa
ಕಾಮಿನೀ ತಲ್ಪ / Kamini Talpa Original price was: ₹75.Current price is: ₹67.
Back to products
ಆಪೋಶನ / Aaposhana
ಆಪೋಶನ / Aaposhana Original price was: ₹100.Current price is: ₹90.

ಮಹಾ ಕಥನದ ಮಾಸ್ತಿ / Maha Kathanada Masthi

Author:Sathyanarayana

Pages:208

Edition: 2020

Book Size: 1/8th Demmy

Binding: Paper Back

Publisher: Vasantha Prakashana

Original price was: ₹160.Current price is: ₹144.

In stock

Description

ಮಹಾ ಕಥನದ ಮಾಸ್ತಿ / Maha Kathanada Masthi – ಲೇಖಕ ಡಾ. ಕೆ. ಸತ್ಯನಾರಾಯಣ ಅವರ ಕೃತಿ-ಮಹಾಕಥನದ ಮಾಸ್ತಿ. ಕನ್ನಡ ಸಾಹಿತ್ಯ ವಲಯದಲ್ಲಿ ಸಣ್ಣ ಕಥೆಗಳ ಜನಕ ಎಂದೇ ಖ್ಯಾತಿಯ ಡಾ. ಮಾಸ್ತಿ ಅವರ ಕಥೆಗಳು ಸೂಕ್ಷ್ಮ ಮನಸ್ಸಿನ ತಾಕಲಾಟ, ತಳಮಳ, ತಲ್ಲಣಗಳನ್ನು ಸಮರ್ಥವಾಗಿ ಹಿಡಿದಿಡುತ್ತವೆ. ಆದ್ದರಿಂದ, ಮಾಸ್ತಿ ಕಥೆಗಳೆಂದರೆ ಓದುಗರ ಮನ ಸೂರೆಗೊಳ್ಳುತ್ತವೆ. ಅವರ ವ್ಯಕ್ತಿತ್ವದ ಎತ್ತರವೂ ಓದುಗರನ್ನು ಆಕರ್ಷಿಸುತ್ತದೆ. ಮಾಸ್ತಿ ಅವರ ಸಾಹಿತ್ಯಕ ಎತ್ತರ-ಆಳ-ಅಗಲಗಳನ್ನುವಿಮರ್ಶಾತ್ಮಕವಾಗಿ ದರ್ಶಿಸುವ ಕೃತಿ.

ಈ ಕೃತಿಯಲ್ಲಿ ಮಾಸ್ತಿಗನ್ನಡಿ(ನಿಜ ಕತೆ), ಕಥಾನಾಯಕನಾಗಿ ಮಾಸ್ತಿ, ಸ್ಥಿತ್ಯಂತರಗಳ ಶತಮಾನದ ಕತೆಗಾರ ಮಾಸ್ತಿ, ಮುಂದಿನ ಶತಮಾನಕ್ಕೆ ಮಾಸ್ತಿಕತೆಗಳು, ಸಮುದಾಯ ಕಥನದ ಕಲೆಗಾರ, ಮಾಸ್ತಿ ಕುರಿತು ಬೇಂದ್ರೆ, ಸಾಹಿತ್ಯದ ಆತ್ಮಜ್ಞಾನ, ಆದಿಕವಿ ವಾಲ್ಮೀಕಿ, ಭಾರತ ತೀರ್ಥ, ಎರಡು ಸಂದರ್ಶನಗಳು, ಪ್ರಾರಂಭದ ಕತೆಗಳು, ಕಾಣುವುದು, ಪ್ರಸ್ತುತಗೊಳಿಸಿಕೊಳ್ಳುವುದು, ಸಾವಿನ ಹೊಸ್ತಿಲಲ್ಲಿ ಬದುಕು, ಇಲಿಚ್ ಮತ್ತು ಮಂತ್ರೋದಯ, ಮಾಸ್ತಿ ಕತೆಗಳು ಮತ್ತು ಮುನೀರ್, ಲೋಕ ಸಂಸಾರದ ವಿನ್ಯಾಸ, ವಿಧಿಯ ಚೌಕಾಭಾರ, ಎಲ್ಲಿಯ ಕತೆ ಇಲ್ಲಿಯ ತೀರ್ಪು, ವಲಸೆಯ ಕಥನ, ಇತಿಹಾಸದ ತಪ್ಪು- ಒಪ್ಪು: ಮಾಸ್ತಿ ನ್ಯಾಯ, ನ್ಯಾಯ-ಸತ್ಯ-ಸಾಕ್ಷಿ, ಪ್ರಭುಗಳ ಕಥನ, ದೊಡ್ಡ ಸ್ವಾಮಿಯವರ ದಿನಚರಿ, ಮಾಸ್ತಿ ಬರೆದ ಮುಸ್ಲಿಂ ಕತೆಗಳು, ಮೊದಲ ಕತೆ- ಕೊನೆಯ ಕತೆ, ಪ್ರತಿರೋಧ- ಪಾವಿತ್ಯ್ರದ ನೆಲೆಗಳು, ಮಹಾನ್ ಕಥನದ ಗುಟ್ಟುಗಳು ಹೀಗೆ ಇವೆಲ್ಲಾವುಗಳನ್ನು ಒಳಗೊಂಡಿದೆ.