ಮಹಾಕಾಲ - ಸ್ಥಿತಿ-2 / Mahakaala - Sthiti- 2
ಮಹಾಕಾಲ - ಸ್ಥಿತಿ-2 / Mahakaala - Sthiti- 2 Original price was: ₹399.Current price is: ₹359.
Back to products
Operation Sindoor
Operation Sindoor Original price was: ₹200.Current price is: ₹180.

ಮಹಿಷಾಸುರಮರ್ದಿನಿ / Mahishasuramardini

Author: Krishnamurthy. R

Pages: 124

Edition: 2025

Book Size: 1/8th Demmy

Binding: Paper Back

Publisher: Ayodhya Publications

Original price was: ₹150.Current price is: ₹135.

In stock

Description

ಮಹಿಷಾಸುರಮರ್ದಿನಿ / Mahishasuramardhini – ಮಹಿಷಾಸುರಮರ್ದಿನಿ ಶಿಲ್ಪದ ಬೆಳವಣಿಗೆ ಮತ್ತು ಮಹಿಷಮಂಡಲ – ಸಂಶೋಧನಾತ್ಮಕ ಕೃತಿ. ಮಹಿಷಾಸುರಮರ್ದಿನಿ ಮಹಿಷಮಂಡಲ ಕುರಿತ ಸುಶೋಧನೆಯನ್ನು ಲೇಖಕರು ಪ್ರಾರಂಬಿಸಿದ್ದು ೨೦೧೫ರಲ್ಲಿ. ನಂತರ ಅದು ಅನೇಕ ಹಂತಗಳನ್ನು ಹಾದು ಈಗ ಕೃತಿರೂಪದಲ್ಲಿ ನಿಮ್ಮೆದುರು ಬರುತ್ತಿದೆ. ಮಹಿಷಾಸುರಮರ್ದಿನಿಯ ಆರಾಧನೆಯ ಮೂಲ, ಬೆಳವಣಿಗೆ, ಮಹಿಷಮಂಡಲದ ಸ್ಥಾನ ನಿಷ್ಕರ್ಷೆ – ಇತ್ಯಾದಿ ವಿಷಯಗಳನ್ನು ಈ ಕೃತಿಯು ವಿಸ್ತೃತವಾಗಿ ಚರ್ಚಿಸುತ್ತದೆ. ೨೫೦೦ ವರ್ಷಗಳಿಂದ ಭಾರತದಲ್ಲಿ ಇರುವ ಶಕ್ತಿ ಆರಾಧನೆ ಹಾಗೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದಕ್ಕೆ ಸಾಮ್ಯತೆಯನ್ನು ತೋರಿಸುವ ಇನ್ನಿತರ ಶಕ್ತಿ ಆರಾಧನಾ ಪದ್ಧತಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ. ಮಹಿಷಮಂಡಲ ಮತ್ತು ಮೈಸೂರು ಭಿನ್ನ ಸ್ಥಳಗಳೇ? ಮಹಿಷಾಸುರನೆಂಬುದು ವ್ಯಕ್ತಿಯ–ಸಂಕೇತವೇ? ಚಾಮುಂಡೇಶ್ವರಿಯನ್ನೇ ಮಹಿಷಾಸುರಮರ್ದಿನಿ ಎನ್ನುತ್ತೇವೆಯೇ? ಕಾವೇರಿ ನದಿ ಕರ್ನಾಟಕವಲ್ಲದೆ ಬೇರಡೆ ಇದೆಯೇ? ಇತ್ಯಾದಿ ಹತ್ತುಹಲವು ಸಂಶಯ, ಪ್ರಶ್ನೆ, ಜಿಜ್ಞಾಸೆಗಳಿಗೆ ಈ ಕೃತಿಯು ಅತ್ಯಂತ ತಲಸ್ಪರ್ಶಿ ಸಂಶೋಧನಾಧಾರಿತ ಉತ್ತರಗಳನ್ನು ಕೊಡುವ ಪ್ರಯತ್ನ ಮಾಡುತ್ತದೆ. ವಿದ್ವತ್ ವಲಯ ಮತ್ತು ಜನಸಾಮಾನ್ಯರೆಂಬ ಎರಡು ವರ್ಗಗಳನ್ನೂ ಗಮನದಲ್ಲಿರಿಸಿಕೊಂಡು, ಐತಿಹಾಸಿಕ ದೃಷ್ಟಿಯ ಈ ಸಂಶೋಧನ ಕೃತಿಯನ್ನು ರಚಿಸಲಾಗಿದೆ.