ಭಾನುಮತಿಯ ಪರಿವಾರ / Bhanumatiya Parivaara
ಭಾನುಮತಿಯ ಪರಿವಾರ / Bhanumatiya Parivaara Original price was: ₹140.Current price is: ₹126.
Back to products

ಮಿಸ್ಸಿನ ಡೈರಿ / Missina Diary

Author:Medini Kesavinamane

Pages:164

Edition: 2024

Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹200.Current price is: ₹180.

In stock

Description

ಮಿಸ್ಸಿನ ಡೈರಿ / Missina Diary -ಬದುಕು ಹಕ್ಕಲ್ಲ; ಕೃತಜ್ಞತೆ. ಹಕ್ಕು ಋಣ, ಕೃತಜ್ಞತೆ ಶಾ೦ತಿ ಮತ್ತು ನೆಮ್ಮದಿ. ಹಕ್ಕಲ್ಲಿ ಹಸಿವು, ಬರ. ಕೃತಜ್ಞತೆಯಲ್ಲಿ ತೃಪ್ತಿ. ಯಾವುದೂ ಹಕ್ಕಾಗದೇ ಎಲ್ಲವನ್ನೂ ಕೃತಜ್ಞತಾ ಭಾವದಲ್ಲಿ ಸ್ವೀಕರಿಸಿರುವ ಈ ಲೇಖಕಿಯ ಮನಸ್ಥಿತಿ ಪ್ರಬುದ್ಧವಾದರೂ ಜೀವರಸ ಬಾಲ್ಯದ ಮುಗ್ಧತೆಯೇ..

ಹಾಗಾಗಿ ಒಂದು ಪ್ರೈಮರಿ ಶಾಲೆಯ ಹತ್ತು ಮತ್ತಷ್ಟು ವರ್ಷಗಳ ಬಾಲಿಶವಾಗಿ ಕಳೆದುಹೋಗಬಲ್ಲಂತಹ ಅನುಭವಗಳು ಪ್ರಬುದ್ಧವಾಗಿ ದಾಖಲಾಗಿವೆ. ಮಕ್ಕಳೊಟ್ಟಿಗೆ ಮಕ್ಕಳಾಗುವುದು ಸುಲಭ. ಘಟನೆಗಳನ್ನು ಮಕ್ಕಳ ಆಟಿಕೆಯೆನಿಸದೇ ಪ್ರಬುದ್ಧವಾಗಿ ಓದುಗರಿಗೆ ತಲುಪಿಸುವುದು ಕಷ್ಟ. ಮೇದಿನಿ ಕೆಸವಿನಮನೆಯವರು ಈ ನಾಡಿನ ಒಂದು ಗ್ರಾಮೀಣ ಪ್ರದೇಶದ ದೈನಂದಿನ ಬದುಕಿನ ಸ್ಥಿತಿಗತಿಗಳನ್ನು ಪ್ರೈಮರಿ ಶಾಲೆಯ ಮಕ್ಕಳ ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿ ಬಿ೦ಬಿಸಿದ್ದಾರೆ. ಭಾಷೆ ಇಷ್ಟವಾಗತ್ತೆ, ಭಾವ ಮನಸ್ಸು ಮುಟ್ಟುತ್ತೆ.

ಅವರದ್ದೇ ಮಾತು; “ಬಾಲ್ಯವೆ೦ಬುದು ಸಮೃದ್ಧವಾಗಿದ್ದರೆ ಬದುಕಿನಲ್ಲಿ ಭಾವ ಎ೦ದೂ ಬತ್ತುವುದಿಲ್ಲ” – ಬಡತನದ ಮನೆಗಳಲ್ಲಿ ಹಸಿವಿನದ್ದೇ ತಾಂಡವ. ಅದು ಲಯಬದ್ಧವಾದಾಗ ಭಾವದ ಚಿಲುಮೆ. ಮುಳುಗಡೆಯ ಭೀತಿ, ಕೈಚಾಚಲಾಗದ ಮನಸ್ಥಿತಿ. ಇಲ್ಲಿ ಒಡಲ ಹಸಿವನ್ನು ತಣಿಸಿ, ಭಾವ ಸಮೃದ್ಧಿಯನ್ನು ಜಿನುಗಿಸಿದ ಅದೊಂದು ತಲೆಮಾರಿಗೆ ಶರಣು.

ಕೊನೆಯ ಮಾತಲ್ಲಿ ಮಂಗಳ ಹಾಡಿದ್ದೀರಿ? ಇದು ನಾಂದಿ; ಮಂಗಳಕ್ಕಿನ್ನೂ ಸಮಯವಿದೆ!