ಮೇಡಮ್ಮನ ಗಂಡ / Medammana Ganda
Author: Beechi
Pages:184
Edition: 2025
Book Size: 1/8th Demmy
Binding: Paper Back
Publisher: Beechi Prakasahana
Description
ಮೇಡಮ್ಮನ ಗಂಡ / Medammana Ganda -ಮೇಡಮ್ಮನ ಗಂಡ’ ಸ್ವಾತಂತ್ಯ್ರಪೂರ್ವದಲ್ಲಿ ಜೀವಿಸಿರಬಹುದಾದ; ಶೋಷಣೆಯನ್ನೇ ತನ್ನ ಜಾಣತನದಿಂದ ಹುರಿದುಮುಕ್ಕುವ ಹೆಣ್ಣೊಬ್ಬಳ ಕತೆ. ಸುಶೀಲೆಯನ್ನು ಆಕೆಯ ಪೋಷಕರು ವೃದ್ಧನೊಬ್ಬನಿಗೆ ಧಾರೆ ಎರೆದುಕೊಟ್ಟಿರುತ್ತಾರೆ. ಪೋಷಕರಿಗೋ ಧನದಾಹ. ಮತ್ತೆ ಆಕೆಯನ್ನು ಇನ್ನೊಬ್ಬನಿಗೆ ಮದುವೆ ಮಾಡಿಕೊಡಲು ಯತ್ನಿಸುತ್ತಾರೆ. ಆದರೆ ದಿಟ್ಟ ಸ್ವಭಾವದ ಆಕೆ ತನ್ನ ವೃದ್ಧ ಗಂಡನನ್ನು ತೊರೆಯಲು ಇಷ್ಟಪಡುವುದಿಲ್ಲ ಬದಲಿಗೆ ಶಿಕ್ಷಕಿಯಾಗಿ ರೂಪುಗೊಳ್ಳುತ್ತಾಳೆ. ಆದರೂ ಆಕೆ ಒಂದು ರೀತಿಯಲ್ಲಿ ವಿಮೋಚನೆ ಪಡೆದರೂ ಪರಾಧೀನತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಧ್ವನಿಯೂ ಕಾದಂಬರಿಯಲ್ಲಿದೆ. ಹಾಗೆಂದು ಕತೆ ಕೇವಲ ಸುಶೀಲೆಯ ಸುತ್ತಲೇ ಸುತ್ತುವುದಿಲ್ಲ. ಎಷ್ಟೋ ಕೊಲೆಗಳನ್ನು ಮಾಡಿಸಿದ ಮಡಕಸಿರದ ವೆಂಕಟರೆಡ್ಡಿ ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ. ಹಾಗೆ ಕೊಲೆಗಳನ್ನು ಮಾಡಿಸಿ ಮೇಲೆ ಬರುವ ವೆಂಟಕರೆಡ್ಡಿ ತನ್ನ ನಂಬಿಕಸ್ಥ ಬಂಟನೊಬ್ಬನಿಂದಲೇ ಹತ್ಯೆಗೀಡಾಗುತ್ತಾನೆ. ಒಳ್ಳೆಯದು- ಕೆಟ್ಟದರ ನಡುವೆ ಒಳ್ಳೆಯದನ್ನೇ ಆಯ್ದುಕೊಳ್ಳಬೇಕೆಂಬ ಸಂದೇಶ ಇದರಲ್ಲಿದೆ.
