ಶ್ರಾವಣ ಪೂರ್ಣಿಮ / Shravana Poornima
ಶ್ರಾವಣ ಪೂರ್ಣಿಮ / Shravana Poornima Original price was: ₹145.Current price is: ₹130.
Back to products
ಪಂಚವಟಿ / Panchavati
ಪಂಚವಟಿ / Panchavati Original price was: ₹160.Current price is: ₹144.

ಮೊಗ್ಗೊಡೆದ ಮೌನ / Moggodeda Mouna

Author: Smt. Saisuthe

Pages: 160

Edition: 2023

Book Size: 1/8th Demmy

Binding: Paper Back

Publisher: Sudha Enterprises

Original price was: ₹150.Current price is: ₹135.

In stock

Description

ಮೊಗ್ಗೊಡೆದ ಮೌನ / Moggodeda Mouna – ಹದಿ ಹರೆಯದ ವಯಸ್ಸಿನಲ್ಲಿ ಗಂಡು ಹೆಣ್ಣು ಪರಸ್ಪರ ಮೊದಲ ನೋಟದ ಆಕರ್ಷಣೆಗೆ ಒಳಗಾಗಿ, ಆಕರ್ಷಣೆ ನಂತರ ಸ್ನೇಹವಾಗಿ ಬದಲಾಗಿ, ಅವರ ನಡುವೆ ಪ್ರೇಮ ಅಂಕುರಿತವಾಗುತ್ತದೆ. ಮುಂದೆ ಇದು ಭಗ್ನಪ್ರೇಮವಾಗುತ್ತದೋ, ಮದುವೆಯಲ್ಲಿ ಕೊನೆಯಾಗುತ್ತದೊ ಅವರವರ ದೃಢ ಸಂಕಲ್ಪವನ್ನು ಅವಲಂಭಿಸಿರುತ್ತದೆ. ಗಾಢವಾದ, ನಿಸ್ವಾರ್ಥ ಪ್ರೇಮ. ಇಂತಹ ಪ್ರೇಮದ ಎರಡು ಮುಖಗಳನ್ನು ಒಂದೇ ಕಾದಂಬರಿಯಲ್ಲಿ ಚಿತ್ರಿಸಿ, ಕತೆಯ ಸೌಂದರ್ಯವನ್ನು “ಮೊಗ್ಗೊಡೆದ ಮೌನ” ಎಂಬ ಕೃತಿಯಲ್ಲಿ ಸಾಯಿಸುತೆ ಅವರು ಹಿಮ್ಮಡಿಗೊಳಿಸಿ ಈ ಕಾದಂಬರಿ ಮೂಲಕ ಓದುಗರ ಮುಂದೆ ಇಟ್ಟಿದ್ದಾರೆ.ಶ್ರೀಕಾಂತಯ್ಯ ಲೀಲಾವತಿ ದಂಪತಿಗಳ ಮಗ ಹೇಮಂತ್, ಅಪ್ಪ ಅಮ್ಮನಿಗೆ ವಿರುದ್ಧವಾಗಿ ವೈಜಯಂತಿಯನ್ನು ಎಂಬ ಶ್ರೀಮಂತ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಮನೆಗೆ ಕರೆತರುತ್ತಾನೆ. ಮುಂದೆ ಇವರ ಬದುಕಿನಲ್ಲಿ ಘಟಿಸುವ ಘಟನೆಗಳು ಅವೆಲ್ಲವನ್ನು ವಿವರವಾಗಿ ವಿವರಿಸುತ್ತಾ ಈ ಕಾದಂಬರಿಯೂ ಮುಂದೆ ಸಾಗುತ್ತದೆ. ನೆಂಟಸ್ಥಿಕೆ ಬಂದರೂ ಮದುವೆಯಾಗಲು ಒಪ್ಪದ ಸರಿತ ತಂದೆ ತಾಯಿಗೆ ಸಮಸ್ಯೆಯಾಗಿ ಪರಿಣಮಿಸುತ್ತಾಳೆ. ಹೇಮಂತ್ ತಂಗಿಯ ಮನಸ್ಸಿನ ಗುಟ್ಟನ್ನು ಹೊರಗೆ ತೆಗೆಯುತ್ತಾನೆ. ಮೂರು ವರ್ಷದ ಹಿಂದೆ ತಂದೆಯ ಬಳಿ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿಯನ್ನು ಮೊದಲ ನೋಟಕ್ಕೆ ಮೆಚ್ಚಿ ಆಕರ್ಷಣೆಗೆ ಒಳಪಟ್ಟಿರುತ್ತಾಳೆ.ಸರಿತಳ ಮನಸ್ಸಿನಲ್ಲಿ ಪ್ರತಿಷ್ಠಾಪನೆಯಾದ ಆ‌ ಮೂರ್ತಿ ಯಾರದು? ಅವನಿಗೆ ಇವಳ ಪ್ರೇಮದ ಅರಿವಿತ್ತೆ? ಅವನ ಹುಡುಕಾಟಕ್ಕಾಗಿ ಹೇಮಂತ್ ಮಾಡಿದ ಪ್ರಯತ್ನಗಳ್ಯಾವುವು? ಅವನ ಪ್ರಯತ್ನ ಸಫಲವಾಯಿತೇ? ಸರಿತಳಿಗೆ ಅವಳ ಆರಾಧ್ಯ ವ್ಯಕ್ತಿ ದೊರಕಿದನೆ? ತಾಯಿಯನ್ನು ಬಿಟ್ಟು ಬಂದ ಆಲಾಪನ ತಂದೆಯ ಮನೆಗೆ ಹೊಂದಿಕೊಂಡಳೇ? ಈ ಎಲ್ಲ ಪ್ರಶ್ನೆಗಳಿಗ ಉತ್ತರವು “ಮೊಗ್ಗೊಡೆದ ಮೌನ” ಎಂಬ ಈ ಕೃತಿಯಲ್ಲಿ ದೊರಕುತ್ತದೆ .