ಯುಗಾದಿ / Yugaadi
Author: Vasudhendra
Pages:164
Edition: 2022
Book Size: 1/8th Demmy
Binding: Paper Back
Publisher: Chanda Pustaka
Description
ಯುಗಾದಿ / Yugadi – ವಸುಧೇಂದ್ರ ಅವರ “ಯುಗಾದಿ” ಎಂಬುದು ಒಂದು ಜನಪ್ರಿಯ ಕಥಾ ಸಂಕಲನವಾಗಿದೆ. ಇದು ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದ್ದು, ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ಗಳಿಸಿದೆ.ಈ ಕಥೆಗಳು ಸಮಕಾಲೀನ ಸಮಾಜದ ವಿವಿಧ ಆಯಾಮಗಳನ್ನು, ಮಾನವ ಸಂಬಂಧಗಳ ಸೂಕ್ಷ್ಮತೆಗಳನ್ನು ಮತ್ತು ಜೀವನದ ವಾಸ್ತವಿಕತೆಗಳನ್ನು ಅನಾವರಣಗೊಳಿಸುತ್ತವೆ. ಸಾಂಪ್ರದಾಯಿಕ ಮತ್ತು ಆಧುನಿಕ ಸಮಾಜಗಳ ನಡುವಿನ ಸಂಘರ್ಷ, ಮತ್ತು ಸಮಾಜದ ನಿಷ್ಕರುಣಿಯಾದ ವ್ಯವಸ್ಥೆಗಳನ್ನು ಲೇಖಕರು ತಮ್ಮ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮನೆಗೆ ಹೋಗುವ ದಿನ ಮಾಸ್ತರರು ರಾಧಳಿಗೆ ಒಂದಿಷ್ಟು ಹಣ್ಣು-ಹಂಪಲುಗಳನ್ನು ಕೊಟ್ಟರು. ಅವುಗಳ ಮೇಲಿಟ್ಟಿದ್ದ ನೋಟುಗಳನ್ನು ನಯವಾಗಿ ನಿರಾಕರಿಸಿದ ರಾಧ, ‘ಏನ್ರಿ ಮಾಸ್ತರ್ರೆ… ನಿಮ್ಮ ಹತ್ತಿರ ಹಣ ಹೆಂಗೆ ತೊಗಳ್ಳಿ ರೀ…’ ಅಂತಂದಳು. ‘ಹಂಗಲ್ಲಮ್ಮ ಇಷ್ಟು ಹಚ್ಚಿಗೊಂಡು ಮಾಡಿದ್ದೆ… ಅದಕ್ಕೆ ಪ್ರತಿಯಾಗಿ ನಾವು ಏನಾರ ಕೊಡಬೇಕೋ ಬ್ಯಾಡೋ…’ ಅಂತಂದರು. ‘ಮಾಸ್ತರ್ರೆ, ಬದುಕು ಮಾಡೋದು ಹೆಂಗೆ ಅಂತ ಕಲಿಸಿ ಕೊಟ್ಟೇರಿ. ಅದಕ್ಕಿಂತ ದೊಡ್ಡದು ಬೇರೆ ಏನು ಕೊಡಲಿಕ್ಕೆ ಆಗೈತೆ ಬಿಡ್ರಿ’ ಅಂತಂದು ಖಡಾಖಂಡಿತವಾಗಿ ಹಣವನ್ನು ನಿರಾಕರಿಸಿಬಿಟ್ಟಳು. ಕಾರಿನ ತನಕ ಬಂದು, ಮಗುವಿನ ಮೂಗನ್ನು “ಅ…ಲ…ಲಾ…’ ಎಂದು ಅಲ್ಲಾಡಿಸಿ ಬೀಳ್ಕೊಟ್ಟಳು. ಕಾರಿನಲ್ಲಿ ವಾಪಾಸು ಮನೆಗೆ ಹೋಗುವಾಗ ಪ್ರಹ್ಲಾದ ಮಾತನಾಡಿದ, “ಅಪ್ಪ ರಾಧಳಂತಹ ವ್ಯಕ್ತಿ ನನ್ನ ಜೀವನದಲ್ಲಿ ಖಂಡಿತಾ ಸಿಗಂಗಿಲ್ಲ ಅನಿಸ್ತದೆ.
