ರಕ್ಷಕ ಅನಾಥ / Rakshaka Anaatha

Author: Vasudhendra

Pages:152

Edition: 2017

Book Size: 1/8th Demmy

Binding: Paper Back

Publisher: Chanda Pustaka

Original price was: ₹110.Current price is: ₹99.

In stock

Description

ರಕ್ಷಕ ಅನಾಥ / Rakshaka Anatha – ವಸುಧೇಂದ್ರ ಅವರ “ರಕ್ಷಕ ಅನಾಥ” ಎಂಬುದು ಲಲಿತ ಪ್ರಬಂಧಗಳ (Essays) ಸಂಗ್ರಹವಾಗಿದೆ. ಇದು ಸರಿಸುಮಾರು ೨೧ ಸಣ್ಣ ಮತ್ತು ಸರಳವಾದ ಪ್ರಬಂಧಗಳನ್ನು ಒಳಗೊಂಡಿದೆ. ಇನ್ನೂರಕ್ಕೂ ಹೆಚ್ಚು ಪಟಗಳನ್ನು ಮನೆ ಕೊಂಡವರು ನನಗೆ ತಂದು ಕೊಟ್ಟರು. ಒಂದೊಂದೇ ಪಟವನ್ನು ನೋಡಿದಾಗಲೂ ನುಗ್ಗಿ ಬರುವ ನೆನಪುಗಳು. ಆದರೆ ಅವುಗಳನ್ನು ರಕ್ಷಿಸುವದಾದರೂ ಹೇಗೆ? ನಮ್ಮ ಬದುಕನ್ನು ಅಪ್ಪಣೆ ಕೊಟ್ಟು ನಡೆಸಿದ ಈ ದೇವಾನುದೇವತೆಗಳು, ಹಿರಿಯರು ನನ್ನ ಕಡೆ ಅಸಹಾಯಕ ದೃಷ್ಟಿಯಿಂದ “ಹೇಗಾದರೂ ಕಾಪಾಡು” ಎಂದು ಬೇಡಿಕೊಳ್ಳಲಾರಂಭಿಸಿದರು. ಉಗ್ರನರಸಿಂಹನ ಉಗುರುಗಳು ಮೊಂಡಾಗಿದ್ದವು. ಲಕ್ಷ್ಮಿಯ ಕೈಯಿಂದ ಸುರಿಯುವ ಬಂಗಾರದ ನಾಣ್ಯಗಳು ಹೊಳವು ಕಳೆದುಕೊಂಡಿದ್ದವು. ಸತ್ಯನಾರಾಯಣನ ಅಕ್ಕಪಕ್ಕದ ಬಾಳೆ ಎಲೆಗಳು ಬಾಡಿದ್ದವು, ಸೂರ್ಯದೇವರಿಗೆ ಗ್ರಹಣ ಹಿಡಿದಿತ್ತು.