ರಾಗಸುಧಾ / Raagasudha
Author: Smt. Saisuthe
Pages: 192
Edition: 2023
Book Size: 1/8th Demmy
Binding: Paper Back
Publisher: Sudha Enterprises
Description
ರಾಗಸುಧಾ / Ragasudha – ಈ ಕಾದಂಬರಿಯು ಬಡ ಮಧ್ಯಮ ವರ್ಗದ ಜನರ ಬದುಕು ಬವಣೆಯನ್ನು ಸುಂದರವಾಗಿ ಸೆರೆಹಿಡಿದಿಯುತ್ತದೆ. ” ಇಂದಿರ, ವಾರಿಧಿ ಅಕ್ಕ ತಂಗಿಯರು ಒಂದೇ ಮಡಿಲಲ್ಲಿ ಆಟವಾಡಿ, ಒಂದೇ ಪರಿಸರದಲ್ಲಿ ಬೆಳೆದವರು, ಆದರೂ ಅವರ ಸ್ವಭಾವಗಳಲ್ಲಿ ಆಕಾಶ ಭೂಮಿಯಷ್ಟು ಅಂತರ. ಸರಳತೆ, ಸೌಜನ್ಯ, ಗಂಭೀರತೆಗೆ ಇನ್ನೊಂದು ಹೆಸರು ಎನ್ನುವಂತಿರುವ, ಸಂಗೀತದಲ್ಲಿ ತೃಪ್ತಿ ಕಾಣುವ ಅದನ್ನೇ ಬದುಕಾಗಿಸಿಕೊಂಡು ಕಾಶೀನಾಥ ಶಾಸ್ತ್ರಿಗಳ ಮೊಮ್ಮಗಳಾಗಿ ಉಳಿದುಬಿಡಲು ಇಚ್ಛಿಸುವ ಇಂದಿರ. ತನ್ನ ಆಸೆ, ಕನಸುಗಳಿಗೆ ಎಂತಹ ಸ್ವಾರ್ಥಕ್ಕಾದರೂ ಇಳಿದು ಆಕಾಶಕ್ಕೆ ಏಣಿ ಹಾಕುವ ವಾರಿಧಿ, ತೀರಾ ಮಹತ್ವಾಕಾಂಕ್ಷಿ. ಶ್ರೀಮಂತರಾಗಿ, ಐಷಾರಾಮಿಯಾಗಿ ಬದುಕುವುದೇ ಗುರಿಯಾಗಿಸಿಕೊಂಡವಳು, ಅವಳ ವಿದ್ಯಾಭ್ಯಾಸದ ಉದ್ದೇಶವೂ ಹಣ ಸಂಪಾದನೆ. ಮೊಮ್ಮಕ್ಕಳಿಗಾಗಿ ಜೀವನ ಮುಡಿಪಾಗಿಟ್ಟ ಹಿರಿಯರು, ಗೆಳೆಯನ ಸಂಸಾರದ ಭಾರ ಹೊರಲು ಸಿದ್ಧವಾಗಿರುವ ನಂಜುಂಡಯ್ಯ. ಇನ್ನು ಮಕ್ಕಳಿಗಾಗಿ ಗಂಡನಿಂದಲೂ ದೂರವಾಗಿ, ಒಂಟಿ ಜೀವನ ನಡೆಸುತ್ತಾ ಮಕ್ಕಳನ್ನು ಬೆಳೆಸುವ ಮೇಧಿನಿ, ಅದ್ಭುತ ವ್ಯಕ್ತಿತ್ವದ ತಾಯಿ. ತಂದೆ ತಾಯಿಯ ದಾಂಪತ್ಯ ಜೀವನದಿಂದ, ಜೊತೆಗೆ ಮದುವೆಯಾಗಬೇಕಾದ ಅನಿವಾರ್ಯಕ್ಕೆ ಒಳಗಾಗಿ ಕಾಂಟ್ರ್ಯಾಕ್ಟ್ ಮದುವೆಯಾಗುವ ಶ್ರೀಹರಿ, ಅಷ್ಟೇ ಬುದ್ಧಿವಂತ ಹಾಗೂ ಗಂಭೀರ. ಮಿತ್ರ ವಿಂದಳನ ವಿಶಿಷ್ಟ ವ್ಯಕ್ತಿತ್ವ ಕಾದಂಬರಿಯ ಆಕರ್ಷಣೆ..” ಇದಿಷ್ಟು ರಾಗಸುಧಾ ಕಾದಂಬರಿಯ ಕಥಾವಸ್ತು.
