ರಾಮಾಯಣ ಪರೀಕ್ಷಣಂ / Ramayana Parikshanam

Author:Dr Rukmini Raghuram

Pages:216

Edition: 2024

Book Size: 1/8th Demmy

Binding: Paper Back

Publisher: Kadamba Prakashana

Original price was: ₹300.Current price is: ₹270.

In stock

Description

ರಾಮಾಯಣ ಪರೀಕ್ಷಣಂ / Ramayana Parikshanam – ಕಥೆಗಳ ರೂಪದಲ್ಲಿ ರುಕ್ಕಿಣಿ ಯವರು, ಹೊಸಗನ್ನಡದಲ್ಲಿ, ಸರಳ ಗದ್ಯದಲ್ಲಿ ಪ್ರಶೋತ್ತರಗಳನ್ನು ಪೂರ್ವ ಕಥೆಗಳನ್ನು ಒಳಗೊಂಡಂತೆ ‘ರಾಮಾಯಣ ಪರೀಕ್ಷಣಂ’ ಗ್ರಂಥವನ್ನು ಹೊಸ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ, ಸಾಮಾನ್ಯ ಓದುಗರಿಗೆ ಮನೋಹರ ಕಥೆಗಳ ಮೂಲಕ ನೀಡಿದ್ದಾರೆ.

ಯಾವುದೇ ಒಂದು ಕೃತಿ, ಅದು ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ ಹೀಗೆ ಯಾವುದೇ ವಿಷಯಕ್ಕೆ ಸಂಬಂಧಿಸಿದ್ದಾಗಿರಲಿ, ಓದುಗರ ಮನಮುಟ್ಟುವಂತೆ ಅದನ್ನು ರಚಿಸುವುದು ಸುಲಭವಲ್ಲ. ಆ ನಿಟ್ಟಿನಲ್ಲಿ ಅನೇಕ ಕೃತಿಕಾರರು ಪ್ರಾಮಾಣಿಕ ಪ್ರಯತ್ನವನ್ನೇನೋ ಮಾಡುತ್ತಾರೆ. ಆದರೆ ಅದರಲ್ಲಿ ಎಲ್ಲರೂ ಸಫಲರಾಗುತ್ತಾರೆಂದು ಹೇಳಲಾಗದು. ಆ ಸಾಮರ್ಥ್ಯ ಸಿದ್ದಿಸುವುದು ಅವರಲ್ಲಿ ಕೆಲವರಿಗೆ ಮಾತ್ರ. ಶ್ರೀಮತಿ ರುಕ್ಕಿಣಿ ರಘುರಾಮ್ ಅವರ ಕೃತಿ ‘ರಾಮಾಯಣ ಪರೀಕ್ಷಣಂ’ ಅನ್ನು ಅವಲೋಕಿಸಿದಾಗ ಈ ನಿಟ್ಟಿನಲ್ಲಿ ಅವರು ನಿಶ್ಚಿತವಾಗಿ ಸಫಲರಾಗಿದ್ದಾರೆಂದು ನನಗೆ ಅನ್ನಿಸಿತು. ಕಾರಣ ಕೃತಿಯ ಕರ್ತ್ರುವೇ ಹೇಳುವಂತೆ ಡಿ.ವಿ.ಜಿ.ಯವರ ‘ಶ್ರೀರಾಮ ಪರೀಕ್ಷಣಂ’ನಿಂದ ಪ್ರಭಾವಿತವಾದ ಈ ಕೃತಿಯ ವಸ್ತುವನ್ನು ಕುರಿತ ಅವರ ನಿರೂಪಣೆ ಅಷ್ಟು ಪ್ರಭಾವಶಾಲಿಯಾಗಿದೆ. ಅದರಲ್ಲೂ ಭಾರತೀಯ ಸಂಸ್ಕೃತಿಯ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿರುವ ರಾಮಾಯಣದ ವಿವಿಧ ಪಾತ್ರಗಳನ್ನು ಚಿತ್ರಿಸಲು ರುಕ್ಕಿಣಿ ಅವರು ಕಥಾರೂಪವನ್ನು ಬಳಸಿಕೊಂಡಿರುವುದು ಕೃತಿಯನ್ನು ಮತ್ತಷ್ಟು ಆಸಕ್ತಿದಾಯಕವನ್ನಾಗಿ ಮಾಡಿದೆ. ಇದರೊಂದಿಗೇ ರುಕ್ಕಿಣಿ ರಘುರಾಮ್ ಅವರ ಪುತ್ರ ಅರ್ಜುನ್ ನಿಟ್ಟೂರು ಕೃತಕ ಬುದ್ಧಿಮತ್ತೆಯ ಬಳಕೆಯ ಮೂಲಕ ಈ ಕೃತಿಗಾಗಿ ಸಿದ್ಧಗೊಳಿಸಿರುವ ಚಿತ್ರಗಳ ಭಾವನಾತ್ಮಕ ಪ್ರಭಾವವು ‘ರಾಮಾಯಣ ಪರೀಕ್ಷಣಂ’ನ ಮೆರುಗು ಇಮ್ಮಡಿಯಾಗುವಂತೆ ಮಾಡಿದೆ. ಶ್ರೀಮತಿ ರುಕ್ಕಿಣಿ ರಘುರಾಮ್ ಅವರಿಂದ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು, ಆಸ್ಥಿತೆಯನ್ನು ಸಾರ್ವಜನಿಕರಿಗೆ ಸಮರ್ಥವಾಗಿ ಪರಿಚಯಿಸುವ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.