ಲೈಫ್ ಇಸ್ ಜಿಂಗಲಾಲ / Life Is Jingalala

Author:Vasanth Gilliyar

Pages:148

Edition: 2023

Book Size: 1/8th Demmy

Binding: Paper Back

Publisher: Sawanna Publication

 

Specification

Original price was: ₹180.Current price is: ₹162.

In stock

Description

ಲೈಫ್ ಇಸ್ ಜಿಂಗಲಾಲ / Life Is Jingalala -“ವಸಂತ್ ಗಿಳಿಯಾರ್ ಬರೆದ ವರದಿಗಳನ್ನು ಓದುತ್ತಿದ್ದರೆ, ನನ್ನ ಆರಂಭದ ದಿನಗಳ ಬರಹಗಳನ್ನು ನೆನಪಿಸುತ್ತಿವೆ. ನನ್ನ ಹೆಜ್ಜೆ ಗುರುತುಗಳಲ್ಲಿ ಸಮರ್ಥವಾಗಿ ನಡೆಯಬಲ್ಲ, ನಡೆಯಬೇಕಾದ ಪತ್ರಕರ್ತ ಹಾಗೂ ಲೇಖಕನೆಂದರೆ ಅದು ಗಿಳಿಯಾರ್” ಹೀಗೆಂದು ಹೆಮ್ಮೆಯಿಂದ ಹೇಳುತ್ತಿದ್ದರು ರವಿ ಬೆಳಗೆರೆ. ಕರಾವಳಿಯ ಇತ್ತೀಚಿನ ವರ್ಷಗಳ “ಲೇಟೆಸ್ಟ್ ಸೆನ್ಸೇಷನ್’ ಪತ್ರಕರ್ತರಾಗಿರುವ ವಸಂತ್‌ರವರ ಒಳಗೆ ಒಬ್ಬ ಅಸಾಮಾನ್ಯ ಬರಹಗಾರ ಹಾಗೂ ಕಥೆಗಾರನಿದ್ದಾನೆ. ಇವರ ಬರವಣಿಗೆಯೆಂದರೆ ಅದು ಅಕ್ಷರಗಳ ಮೆರವಣಿಗೆ. ಒಬ್ಬ ಪರಿಪೂರ್ಣ ಬರಹಗಾರನಿಗೆ ಇರಬೇಕಾದ ಕುಶಾಗ್ರಮತಿ, ಬರವಣಿಗೆ ಶೈಲಿ, ಬದ್ಧತೆಗಳ ಮೂರ್ತರೂಪವಾಗಿ ಕಾಣಿಸುತ್ತಾರೆ ವಸಂತ್. ತನ್ನ ಹೋರಾಟಗಳು, ಸಮಾಜ ಸೇವೆಯಂತಹ ಜಂಜಡಗಳಿಂದ ದೂರವಾಗಿ ತನ್ನೊಳಗಿನ ಲೇಖಕನಿಗೆ ಕಿವಿಯಾದ ಕಾರಣಕ್ಕೆ ಹೊಸ ಉಗಮ, ಬಹು ನಿರೀಕ್ಷೆಯ ಈ ಪುಸ್ತಕ ‘ಲೈಫ್ ಈಸ್ ಜಿಂಗಲಾಲ. ಈ ಬರಹದ ಪ್ರಯತ್ನ ನಿರಂತರವಾಗಲಿ. ಕನ್ನಡಕ್ಕೆ ಇನ್ನೋರ್ವ ಸಮರ್ಥ ಬರಹಗಾರನನ್ನು ಕೊಟ್ಟ ಸಾರ್ಥಕ್ಯ ಕರಾವಳಿಯದ್ದಾಗಲಿ.