ವಂಶವೃಕ್ಷ / Vamshavruksha
Author:S L Byrappa
Pages:388
Edition: 2025
Book Size: 1/8th Demmy
Binding: Paper Back
Publisher:Sahitya Bhandra
Description
ವಂಶವೃಕ್ಷ / Vamshavruksha – ವಂಶವೃಕ್ಷ ಹೆಸರೇ ಹೇಳುವಂತೆ ಇದೊಂದು ವಂಶದ ಕಥೆ. ಆ ವಂಶದ ಸುತ್ತ ಸುತ್ತಿಕೊಂಡಿರುವ, ಅಲ್ಲಿನ ವ್ಯಕ್ತಿಗಳ ಜೀವನದಲ್ಲಿ ಹಾಸುಹೊಕ್ಕಾದ ಇತರೆ ಪ್ರಮುಖ ಜೀವಿಗಳ ಕಥೆ. ವಂಶಕ್ಕಾಗಿ, ವಂಶದ ಹಿಂದಿನ ಪಿತೃಗಳಿಗಾಗಿ ಅಧರ್ಮದ ಹಾದಿ ತುಳಿಯದೆ ಅಪರಿಮಿತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ತನ್ನತನವನ್ನು ದಾರಿತಪ್ಪದೆ ನಡೆವ ನಿಷ್ಠನೊಬ್ಬನ ಕಥೆ.
ನೂತನ ಸಂವತ್ಸರ ಕಾಣುವ ಹೊಸ್ತಿಲಲ್ಲಿದ್ದಾಗ ಬದುಕು ಬರಸಿಡಿಲಂತೆ ಅಪ್ಪಳಿಸಿ ಆಗ ತಾನೇ ಚಿಗುರೊಡೆದಿದ್ದ ಹಸಿ ಕನಸುಗಳನ್ನು ಚಿವುಟಿ ಅತ್ತ ವೈಧ್ಯವ್ಯ ತಂದಿತ್ತ ದುರ್ದೆಸೆಯಲ್ಲಿ ಜೀವಿಸಲೂ ಆಗದೆ ಇತ್ತ ವಯೋಸಹಜ ಬಯಕೆಗಳನ್ನು ಸನಾತನ ಧರ್ಮದ ಚೌಕಟ್ಟಿನೊಳಗೆ ಅದುಮಿಟ್ಟುಕೊಳ್ಳಲೂ ಆಗದೆ ಗೊಂದಲಕ್ಕೆ ಸಿಕ್ಕುವ ಅಸಂತೃಪ್ತೆಯೊಬ್ಬಳ ಕಥೆ.
ಭಾರತದ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಲಿಚ್ಚಿಸುವ ಆಕಾಂಕ್ಷಿಗಳಿಗೋಸ್ಕರ, ಜ್ಞಾನಪಿಪಾಸುಗಳಿಗೋಸ್ಕರ ತನ್ನಿಡೀ ಆಯುಷ್ಯ ಆರೋಗ್ಯವನ್ನು ತೇಯುವ ಒಬ್ಬ ಸರಳ ಸ್ನೇಹಜೀವಿಯೊಬ್ಬನ ಬದುಕಿನ ವ್ಯಥೆ – ಕಥೆ.
