ಮೇಘವರ್ಷಿಣಿ / Meghavarshini
ಮೇಘವರ್ಷಿಣಿ / Meghavarshini Original price was: ₹250.Current price is: ₹225.
Back to products
ರಾಗ ಬೃಂದಾವನ / Raaga Brindavana
ರಾಗ ಬೃಂದಾವನ / Raaga Brindavana Original price was: ₹190.Current price is: ₹171.

ವರ್ಷಬಿಂದು / Varshabindu

Author:  Saisuthe

Pages:216

Edition: 2022

Book Size: 1/8th Demmy

Binding: Paper Back

Publisher: Sudha Enterprises

Original price was: ₹185.Current price is: ₹167.

In stock

Description

ವರ್ಷಬಿಂದು / Varshabindu – ನಮ್ಮದೇ ಆದ ವೈಯಕ್ತಿಕ ಬದುಕಿನಲ್ಲಿ ನಮ್ಮನ್ನು ನಾವೇ ಆಳುವ ಮನಸ್ಥಿತಿಯಿರಬೇಕು. ನಮ್ಮೊಳಗೆ ನಾವೇ ಒಂದು ಆಪ್ತತೆಯ ಭಾವ ಸೃಷ್ಟಿಸಿಕೊಂಡು ಮುಕ್ತವಾಗಿ ಅನುಭವಿಸಿಬಿಡಬೇಕು.. ಅನಿವಾರ್ಯ ಪರಿಸ್ಥಿತಿಗಳನ್ನು ಹೊರತುಪಡಿಸಿ ತೀರಾ ಇಂತಹುದಕ್ಕೂ ಬೇರೆಯವರ ಸಹಾಯ ಪಡೆದರೆ ನಮ್ಮ ಬದುಕಿನ ಸ್ವಾತಂತ್ರ್ಯದಿಂದ ನಾವೇ ವಂಚಿತರಾಗಿ ಬಿಡುತ್ತೇವೆ ಅಲ್ಲವೇ..? ದುಡಿದ ದುಡಿಮೆಯಲ್ಲಿ ದುಂದುವೆಚ್ಚ ಸಲ್ಲದು. ಆದರೆ ಮುಕ್ತನಗೆಯೊಂದು ಚೆಲ್ಲಲು… ಮನಬಿಚ್ಚಿ ಹರಟಲು… ಹೊಟ್ಟೆ ತುಂಬ ತಿನ್ನಲು ಜಿಪುಣುತನವೇ… ಇದರಿಂದ ಮನಸ್ಸಿಗೂ ದೇಹಕ್ಕೂ ಸಮಾಧಾನ ಸಿಕ್ಕೀತೇ..? ಅಷ್ಟು ದೊಡ್ಡ ದೊಡ್ಡ ಡಿಗ್ರಿಗಳ ಸರಮಾಲೆ ಹೆಸರಿನ ಮುಂದೆ ಪೇರಿಸಿಕೊಂಡರೂ ಇಂತಹ ಕನಿಷ್ಟ ವಿಷಯದ ಬಗ್ಗೆ ಆಲೋಚಿಸದ ಮೂರ್ಖರೇ… ಇವರು ವಿದ್ಯಾವಂತರಾಗಲು ಹೇಗೆ ಸಾಧ್ಯ..? ಇಂತಹವರು ಪ್ರಬುದ್ಧರು ಹೇಗಾದಾರು…? ಬೌದ್ಧಿಕವಾಗಿ ಬೆಳೆಯದೆ ಮಾನಸಿಕವಾಗಿಯೂ ಬೆಳೆಯಲಾಗದು.. ಇದಕ್ಕೆ ವಿದ್ಯೆಯೇ ಇರಬೇಕೆಂದು ಕಡ್ಡಾಯವಿಲ್ಲ. ಮನಸಿನ ಪದರಗಳಲ್ಲಡಗಿದ ಭಾವನಾತ್ಮಕ ಬೀಜಗಳು ಫಲವತ್ತಾಗಿ ಬೆಳೆಯಲು ಮನಸ್ಸು ಹೃದಯ ಸಹಕರಿಸಿದರೆ ಸಾಕೇನೋ..!!

ಇಲ್ಲಿನ ಬಹುಮುಖ್ಯ ಪ್ರಶ್ನೆಯೆಂದರೆ ಜೀವನದ ಮುಖ್ಯ ಉದ್ದೇಶ ಶಿಕ್ಷಣ ಎಂದು ಮಕ್ಕಳ ಮೇಲೆ ಒತ್ತಾಯ ಒತ್ತಡವೇರುವ ಪಾಲಕರ ನಿರ್ಧಾರ ತಪ್ಪೇ..? ಖಂಡಿತವಾಗಿಯೂ ಇಲ್ಲ. ಅವರ ಅನುಭವಗಳ ಮೂಸೆಯಲ್ಲಿ ಪಟ್ಟ ಕಷ್ಟಗಳನ್ನು ತಮ್ಮ ಮಕ್ಕಳಿಗೆ ಬರಬಾರದೆಂಬ ಅವರ ಯೋಚನೆಗೆ ಎರಡು ಮಾತಿಲ್ಲ. ರಾಜಾಪ್ರತಾಪ್… ನರೋನ.. ಅಜೇಯ ವಸಿಷ್ಠ.. ಅಭಿಷೇಕ್ ವಸಿಷ್ಠ ಇವರೆಲ್ಲರ ದರ್ಪ ಗತ್ತು ವಿದ್ಯೆ ಹಣ ಇವೆಲ್ಲದರ ನಡುವೆ ಚಲಪತಿ ತಮ್ಮ ಕುಟುಂಬ ಪ್ರೇಮ.. ಆತ್ಮೀಯತೆಗಳಿಂದ ಒಂದು ಹಿಡಿ ಹೆಚ್ಚಾಗಿಯೇ ತೂಗುತ್ತಾರೆ. ಇಂತಹ ಒತ್ತಾಯ ಒತ್ತಡ ಗೊಂದಲ ಗೋಜಲುಗಳ ನಡುವೆ ವಿಭಿನ್ನ ಮನಸ್ಥಿತಿಯ ಒಂದೇ ಬಳ್ಳಿಯ ಹೂಗಳಾದ ವರ್ಣ ವರ್ಷರ ಬದುಕಿನ ತಿರುವುಗಳಲ್ಲಿ ವರ್ಣಳ ಬದುಕು ವರ್ಣಮಯವಾಯಿತೇ..? ವರ್ಷಳ ಬದುಕು ದಡಸೇರಿತೇ..? ಈ ಎಲ್ಲಾ ಪ್ರಶ್ನೆಗಳ ಉತ್ತರ ಸಾಯಿಸುತೆಯವರ “ವರ್ಷಬಿಂದು”… ಸರಳ ನಿರೂಪಣೆಯಿಂದ ಮನಸೆಳೆಯುತ್ತದೆ.. ಸರಾಗವಾಗಿ ಓದಿಸಿಕೊಂಡು ಹೋದ ಕಾದಂಬರಿ…