ಕುಂತ್ರೆ ನಿಂತ್ರೆ ಬೇಂದ್ರೆ / Kuntre Nintre Bendre
ಕುಂತ್ರೆ ನಿಂತ್ರೆ ಬೇಂದ್ರೆ / Kuntre Nintre Bendre Original price was: ₹175.Current price is: ₹158.
Back to products
ಬೆರಗಿನ ಬೆಳಕು ಭಾಗ - 3 / Beragina Belaku Bhaga - 3
ಬೆರಗಿನ ಬೆಳಕು ಭಾಗ - 3 / Beragina Belaku Bhaga - 3 Original price was: ₹150.Current price is: ₹135.

ವಿಜ್ಞಾನ ಲೋಕದ ಧ್ರುವತಾರೆಗಳು / Vijnana Lokada Dhruvataregalu

Author:G V Niramala

Pages:232

Edition: 2024

Book Size: 1/8th Demmy

Binding: Paper Back

Publisher:Sneha Book House

Original price was: ₹275.Current price is: ₹247.

In stock

Description

ವಿಜ್ಞಾನ ಲೋಕದ ಧ್ರುವತಾರೆಗಳು / Vijnana Lokada Dhruvataregalu -ಇದು ಕರ್ನಾಟಕದ ಮುವ್ವತ್ತಮೂರು ವಿಜ್ಞಾನಿಗಳ ಮಾಹಿತಿಗಳನ್ನುಳ್ಳ ಪುಸ್ತಕ. ಇವರೆಲ್ಲರೂ ದೇಶದ ಔದ್ಯಮಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ದೊಡ್ಡ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರ ಕಾರ್ಯಗಳ, ಸಂಶೋಧನೆಗಳ ಬಗ್ಗೆ ನಾವು ತಿಳಿದುಕೊಂಡಾಗ ಧನ್ಯತಾಭಾವವು ಮೂಡುತ್ತದೆ.

ಈ ಪುಸ್ತಕವನ್ನು ಪರಿಶೀಲಿಸುವ ಹಿರಿಯರು ತಮ್ಮ ಮನೆಯಲ್ಲಿರುವ ಕಿರಿಯರ ಬಳಿ ಇದನ್ನು ಓದಿಸಲೇಬೇಕು. ಇದಕ್ಕೆ ಮೊದಲನೆಯ ಕಾರಣ: ಕಿರಿಯರಿಗೆ ತಾವೂ ಹೀಗೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಪ್ರಭಾವವಾಗುವುದು. ಎರಡನೆಯದು: ಅಪ್ಪಟ ವಿಜ್ಞಾನದ ವಿಷಯಗಳಲ್ಲದೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಲಿತವರೂ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಬಹುದು ಎಂದೂ ಮನದಟ್ಟಾಗುವುದು.

ಔದ್ಯಮಿಕ ಕ್ಷೇತ್ರದಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ ದಾಪುಗಾಲು ಹಾಕುತ್ತಿರುವ ನಮ್ಮ ದೇಶದ ಆ ಕ್ಷೇತ್ರಕ್ಕೆ ಪೂರಕವಾಗಿ ಸಂಶೋಧನಾ ಕ್ಷೇತ್ರವು ಬಹಳಷ್ಟು ಬೆಳೆಯಬೇಕು. ಅಂದರೆ ಸಾವಿರಾರು ಸಂಖ್ಯೆಯ ಯುವವಿಜ್ಞಾನಿಗಳು ನಮಗೆ ಬೇಕು. ಅಂಥ ಅನೇಕರಿಗೆ ಈ ಪುಸ್ತಕವು ಉತ್ತೇಜನ ನೀಡುತ್ತದೆ.