ವಿಹಿತವಿದ್ಯಾ / Vihitavidya
Author:Narayana Shevire
Pages:264
Edition: 2020
Book Size: 1/8th Demmy
Binding: Paper Back
Publisher: Ayodhya Publication
Specification
Description
ವಿಹಿತವಿದ್ಯಾ / Vihitavidya -ಲೇಖಕ ನಾರಾಯಣ ಶೇವಿರೆ ಅವರ ಕೃತಿ ವಿಹಿತವಿದ್ಯಾ. ಭಾರತೀಯ ಶಿಕ್ಷಣ, ಗುರುಕುಲ ಪದ್ಧತಿ, ಸರ್ವಾಂಗೀಣ ವ್ಯಕ್ತಿತ್ವ ವಿಕಸನ, ಸ್ತ್ರೀ ಶಿಕ್ಷಣ – ಮುಂತಾದ ಹಲವು ವಿಚಾರಗಳ ಬಗ್ಗೆ ಧ್ಯಾನಸ್ಥ ಸ್ಥಿತಿಯಲ್ಲಿ ಮಾತಾಡುವ ಬುದ್ಧಿಪ್ರಚೋದಕ ಸಾಂದ್ರ ಕೃತಿ. ಮೆಕಾಲೆ ನೀತಿಯಿಂದ ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಡೆದ ಪ್ರಹಾರದ ಬಗ್ಗೆ ಸೂಕ್ಷ್ಮವಾಗಿ ಹೇಳುತ್ತಲೇ ಇದು ಪಾಶ್ಚಾತ್ಯ ಕ್ರಮವನ್ನು ಕೈಬಿಟ್ಟು ಶುದ್ಧ ಭಾರತೀಯ ಚಿಂತನಕ್ರಮವನ್ನು ಅಳವಡಿಸಿಕೊಳ್ಳಲು ಕರೆ ಕೊಡುತ್ತದೆ.
ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿ ಬಿ.ಎಲ್.ಸಂತೋಶ್ ಅವರು ಕೃತಿಯ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ನಾರಾಯಣ ಶೇವಿರೆ ಅವರ ಚಿಂತನಾ ಶೈಲಿ ಮತ್ತು ವಿಷಯದ ಆಳಕ್ಕಿಳಿದು ಅದರ ಪೂರ್ವಾಪರಗಳನ್ನು, ಸಾಧಕ ಬಾಧಕಗಳನ್ನು ವಿಶ್ಲೇಷಿಸುವ ವಿಶಿಷ್ಟ ಪಲ ಬೆರಗು ಮೂಡಿಸುವಂತರಹದ್ದು. ಮೇಲ್ನೋಟಕ್ಕೆ ತೀರಾ ಚಿಕ್ಕದೆನಿಸುವ ವಿಷಯಗಳನ್ನು ಹಂತಹಂತವಾಗಿ ಸುಲಿಯುತ್ತಾ, ಅದರ ಪದರಗಳನ್ನೆಲ್ಲ ಖಾಅಗೊಳಿಸಿ ಅದರ ಸಹಜ ಸ್ಥಿತಿಯಲ್ಲಿ ನೋಡುವ ಮತ್ತು ಓದುಗನಿಗೆ ತೋರಿಸುವ ಶಕ್ತಿ ಶೇವಿರೆಯವರ ಬರಹತ್ತಿದೆ. ಅವರಿಗೆ ತೋಚಿದ ಸಂಗತಿಯನ್ನು ಮುಂದಿನವರಿಗೆ ಅಕ್ಷರ ಅಥವಾ ಮಾತಿನ ಮೂಲಕ ಸಮರ್ಥವಾಗಿ ದಾಣಸಲು ಕವಿ ಶಕ್ತಿ ಬೇಕು. ಆ ಶಕ್ತಿ ಇಲ್ಲದೇ ಹೋದರೆ ಲೇಖಕನಿಗೂ ಲೇಖನವನ್ನು ಓದುವವನಿಗೂ ಸೇತುವೆಯೇ ನಿರ್ಮಾಣವಾಗುವುದಿಲ್ಲ. ‘ವಿಹಿತವಿದ್ಯಾ’ವು ಅಂತಹ ಕವಿ ಭಾವದ ಮೂಲಕ ಭಾರತೀಯ ಜ್ಞಾನಪರಂಪರೆಯಕೆಲವು ಪುಟಗಳನ್ನು ತೆರೆದಿಡುತ್ತದೆ. ಈ ಪುಸ್ತಕದಲ್ಲಿ ದಾಖಲಾಗಿರುವ ಆಳವಾದ ವಿಶ್ಲೇಷಣಿ ಮತ್ತು ವಿಮರ್ಶೆಗೆ ಶೇವಿರೆಯವರು ಎಷ್ಟು ಸಮಯ ಹೊಟ್ಟರು, ಹೇಗೆ ಕೊಟ್ಟರು ಎಂಬುದೇ ಸೋಜಿಗ. ತಮ್ಮ ನಿರಂತರ ಓಡಾಟ ಮತ್ತು ಸಾಹಿತ್ಯ ವಲಯದ ಸಂಘಟನೆಯಲ್ಲಿ ಚಿಡುವಿಲ್ಲದಿರುವಾಗಲೂ ಇಷ್ಟೆಲ್ಲ ಬರೆದಿದ್ದಾರೆಂದರೆ ಅವರದ್ದು ಧ್ಯಾನದ ಮನಃಸ್ಥಿತಿ ಎಂದರೆ ತಪ್ಪಾಗಲಾರದು ಎಂದಿದ್ದರೆ.
