ವ್ಯಕ್ತಿವಿಶಿಷ್ಟ ಸಿದ್ದಾಂತ ಮತ್ತು ಯಮಳ ಪ್ರಶ್ನೆ / Vyakti Vishista Siddantha Mattu Yamala Prashne

Author: K.P. Purnachandra Tejasvi

Pages: 54

Edition: 2023

Book Size: 1/8th Demmy

Binding: Paper Back

Publisher: Pustakaprakashana

Original price was: ₹60.Current price is: ₹54.

In stock

Description

ವ್ಯಕ್ತಿವಿಶಿಷ್ಟ ಸಿದ್ದಾಂತ ಮತ್ತು ಯಮಳ ಪ್ರಶ್ನೆ / Vyakti Vishista Siddantha Mattu Yamala Prashne – ಲಹರಿ ಬುದ್ದಿ ಪ್ರಚಾರ ಯೋಜನೆಯಡಿ ಪ್ರಕಟವಾದ ವ್ಯಕ್ತಿ ವಿಶಿಷ್ಟ ಸಿದ್ಧಾಂತ (1964) ಒಂದು ವೈಚಾರಿಕ ಕೃತಿ. ’ಅಲಕ್ಷ ಮತ್ತು ಸಂಸ್ಕೃತಿ ಸ್ಥಿತಿ’, ‘ವ್ಯಕ್ತಿ ವಿಶಿಷ್ಟ ಸಿದ್ದಾಂತ’, ‘ವ್ಯಕ್ತಿ ವಿಶಿಷ್ಟವಾದಿ, ವಿವಾಹ, ಪ್ರೇಮ’, ಎನ್ನುವ ಮೂರು ಲೇಖನಗಳಿವೆ. ಸ್ವಲ್ಪಮಟ್ಟಿಗೆ ಅಸ್ತಿತ್ವವಾದಿ ಸಿದ್ಧಾಂತದ ತಾತ್ವಿಕತೆಗಳನ್ನು ಹೋಲುತ್ತದೆ.

1964ರಲ್ಲಿ ಪ್ರಕಟವಾದ ತೇಜಸ್ವಿಯವರ ಏಕೈಕ ನಾಟಕ ’ಯಮಳ ಪ್ರಶ್ನೆ’. ಇದೊಂದು ಅಸಂಗತ ನಾಟಕ. ನವ್ಯ ಮಾರ್ಗವು ಚಾಲ್ತಿಯಲ್ಲಿ ಪ್ರಕಟವಾಗಿತ್ತು. ಮಾರ್ಗ ಮಧ್ಯೆ ಕೆಟ್ಟುನಿಂತ ಮೋಟಾರು ಬೈಕು ಮತ್ತು ತರುಣರಿಬ್ಬರ ಸಂವಾದದ ಸುತ್ತ ಸಾಗುವ ಈ ನಾಟಕ ಮುಕ್ತಾಯವಾಗುವಷ್ಟರಲ್ಲಿ ಜೀವನದ ಸಂಕೀರ್ಣತೆಯನ್ನು, ಅಸಂಗತತೆಯನ್ನು ಬಿಂಬಿಸುವ ಹಲವು ಪ್ರಸಂಗ ಬಂದು ಹೋಗುತ್ತವೆ. ಇಲ್ಲಿನ ಮೋಟಾರು ಬೈಕು ಚಿಕಿತ್ಸೆಗೆ ಗುರಿಪಡಿಸಲಾಗದ ನಮ್ಮ ವ್ಯವಸ್ಥೆಯ ಸಂಕೇತವಾಗಿ; ಹಾಗೆಯೇ ತರುಣರ ಸಂವಾದವು ಏನನ್ನೂ ಸಾಧಿಸಲಾಗದ ವ್ಯರ್ಥ ಮಾತುಗಳಾಗಿ, ಅರ್ಥರಹಿತವಾಗಿ ಕಾಣುತ್ತವೆ.