ವ್ಯಾಘ್ರಹತ್ಯೆಯ ನಿಗೂಢಗಳು / Vyaghrahatyeya Nighoodagalu
Author:Dr T S Vivekanada
Pages:168
Edition: 2024
Book Size: 1/8th Demmy
Binding: Paper Back
Publisher: Veeraloka Books PVT .LTD.
Description
ವ್ಯಾಘ್ರಹತ್ಯೆಯ ನಿಗೂಢಗಳು / Vyaghrahatyeya Nighoodagalu -ಡಾ. ಟಿಸ್ವಿ ಪರಿಸರವನ್ನು ಕುರಿತು ತಮ್ಮ ಅಧ್ಯಯನಗಳಿಂದಾಗಿ ಕನ್ನಡ ಸಂವೇದನಾಶೀಲ ಮನಸ್ಸುಗಳಿಗೆ ಪರಿಚಿತರು. ಬಹುತೇಕರ ಹಾಗೆ ಪರಿಸರ ಅಧ್ಯಯನವೆಂದರೆ ಜೀವವೈವಿಧ್ಯ ಕುರಿತ ವಿಸ್ಮಯಕಾರಿಯಾದ ಶುಪ್ಕ ಮಾಹಿತಿಗಳನ್ನು ಒದಗಿಸುವುದು ಎನ್ನುವ ಕ್ರಮ ಇವರದ್ದಲ್ಲ, ಬದಲಾಗಿ ಇದು ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕತೆಗಳ ಸಂಕಥನವೆಂದು ಇವರು ಪರಿಭಾವಿಸುವುದರಿಂದಾಗಿ ಇವರ ಪರಿಸರ ಅಧ್ಯಯನ ಜೀವಪರ ನೆಲೆಗಳ ಹುಡುಕಾಟದ ವೇದಿಕೆಯಾಗಿ ರೂಪಗೊಂಡಿದೆ.ಪಶ್ಚಿಮದ ಚಿಂತನೆಗಳ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ, ಹಣದ ಒತ್ತಾಸೆಗಳಿಂದ ಪ್ರೇರಿತವಾದ ಪರಿಸರವಾದ ಮತ್ತು ಧೋರಣೆಗಳು ಜೀವಸಂಕುಲದ ಭವಿಷ್ಯಕ್ಕೆ ಭಾಷ್ಯ ಬರೆಯುತ್ತಿರುವ ತಣ್ಣನೆಯ ಕ್ರೌರ್ಯದ ಭೀಭತ್ಸತೆಯನ್ನು ಇವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಾರೆ.ಅಧ್ಯಯನದ ಶಿಸ್ತೂಂದು ಶೋಕಿಯಾದಾಗ ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಳಿಂದ ದೂರ ಸರಿದು ಮೌಡ್ಯದ ಪೋಷಣೆಯ ಕೇಂದ್ರವಾಗಿ ಮಾರುಕಟ್ಟೆ ಸಂಸ್ಕೃತಿಯ ವಿಸ್ತರಣೆಯಾಗುವುದು ಬದುಕಿನ ಮಹಾ ದುರಂತ. ಈ ಪ್ರವೃತ್ತಿ ತನ್ನೆಲ್ಲಾ ಪಾಪಗಳನ್ನು ಶತಮಾನಗಳಿಂದ ಪರಿಸರ ಸ್ನೇಹಿ ಸಂಸ್ಕೃತಿಯನ್ನು ಬದುಕುತ್ತಾ ಬಂದಿರುವ ಶಾಪಗ್ರಸ್ಥ ಸಮುದಾಯಗಳ ತಲೆಗಳಿಗೆ ಕಟ್ಟುವ ಯೋಜಿತ ವ್ಯವಸ್ಥೆಯಲ್ಲಿ ಸಫಲವಾಗುತ್ತಾ ಈ ಸಮುದಾಯಗಳು ವಿನಾಕಾರಣ ಯಾತನಾಮಯ ಬದುಕನ್ನು ನಡೆಸಬೇಕಾದ ಅನಿವಾರ್ಯವಾದ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟಿರುವುದನ್ನು ಮಾರ್ಮಿಕವಾಗಿ ನಿರೂಪಿಸಿದ್ದಾರೆ.
