ಪುಟಗಳ ನಡುವಣ ನವಿಲುಗರಿ / Putagala Naduvana Navilugari
ಪುಟಗಳ ನಡುವಣ ನವಿಲುಗರಿ / Putagala Naduvana Navilugari Original price was: ₹240.Current price is: ₹216.
Back to products
ಕಲಾಕೌತುಕ / Kalakouthuka
ಕಲಾಕೌತುಕ / Kalakouthuka Original price was: ₹180.Current price is: ₹162.

ವ್ಯಾಸ ಮಹಾಭಾರತ / Vyasa Mahabharatha

Author: Su. Rudramurthy Shastry

Pages: 974

Edition: 2021

Book Size: 1/8th Demmy

Binding: Hard Bound

Publisher: IBH Prakashana

Original price was: ₹950.Current price is: ₹855.

In stock

Description

ವ್ಯಾಸ ಮಹಾಭಾರತ / Vyasa Mahabharatha – ಸು. ರುದ್ರಮೂರ್ತಿ ಶಾಸ್ತ್ರಿ ಅವರು ಬರೆದಿರುವ “ವ್ಯಾಸ ಮಹಾಭಾರತ: ಸಂಕ್ಷಿಪ್ತ ಸರಳ ಗದ್ಯಕಥನ” ಎಂಬ ಪುಸ್ತಕವು ಕನ್ನಡದಲ್ಲಿ ಲಭ್ಯವಿದೆ. ಇದು ಮಹಾಭಾರತದ ಸರಳ ಮತ್ತು ಸಂಕ್ಷಿಪ್ತ ಗದ್ಯ ರೂಪದ ಕಥನವಾಗಿದೆ. ಮಹಾಭಾರತ ಭಾರತದ ಧರ್ಮಗ್ರಂಥವೂ ಹೌದು, ಮಹಾ ಕಾವ್ಯವೂ ಹೌದು. ಭಾರತೀಯ ಜನಜೀವನದಲ್ಲಿ ಅದು ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಭಾರತದ ಎಲ್ಲ ಭಾಷೆಗಳಲ್ಲೂ ಮಹಾಭಾರತ ಹಲವು ರೂಪಗಳಲ್ಲಿ ಪುನಃಸೃಷ್ಟಿಯಾಗಿದೆ. ಕನ್ನಡದಲ್ಲಿ ಪಂಪನ ವಿಕ್ರಮಾರ್ಜುನ ವಿಜಯ, ರನ್ನನ ಗಧಾಯುದ್ಧ, ಕುಮಾರವ್ಯಾಸನ ಭಾರತ ಎಂಬ ಹಳಗನ್ನಡ, ನಡುಗನ್ನಡ ಮಹಾಕಾವ್ಯಗಳ ಜೊತೆಗೆ, ಆಧುನಿಕ ಕಾಲದಲ್ಲಿ ಕಾದಂಬರಿ, ನಾಟಕ ರೂಪಗಳಲ್ಲಿ ಮತ್ತೆ ಮತ್ತೆ ಪುನರ್ಜನ್ಮ ತಾಳುತ್ತಲೇ ಇದೆ. ಸಾವಿರಾರು ವರ್ಷಗಳ ನಂತರವೂ ಮಹಾಭಾರತ ಕಥೆ, ಅದರ ಸಂದರ್ಭಗಳು, ಪಾತ್ರಗಳು ಇಂದಿಗೂ ಭಾರತೀಯ ಜನಮಾನಸದಲ್ಲಿ ಜೀವಂತವಾಗಿವೆ. ಪಂಡಿತ ಪಾಮರರೆಲ್ಲರಿಗೂ ಮಹಾಭಾರತದ ಕಥೆ ಗೊತ್ತು, ಪಾತ್ರಗಳು ಗೊತ್ತು, ನಿತ್ಯದ ಸಂಭಾಷಣೆಗಳಲ್ಲೂ ಪಾತ್ರಗಳು ಮತ್ತು ಸಂದರ್ಭಗಳು ಹೋಲಿಕೆಯ ರೂಪದಲ್ಲಿ ವ್ಯಕ್ತವಾಗುತ್ತಿರುವುದೇ ಮಹಾಭಾರತದ ಸಾರ್ವತ್ರಿಕತೆಗೆ, ಶಾಶ್ವತತೆಗೆ ಸಾಕ್ಷಿಯಾಗಿದೆ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರಿಗೆ ಮಾರ್ಗದರ್ಶನ ನೀಡುತ್ತಿದೆ.