ಶಿವರಾಮ ಕಾರಂತರ ಬೆಟ್ಟದ ಜೀವ / Shivarama Karantara Bettada Jeeva
Author: Dr. Sridhar Hegde
Pages: 142
Edition: 2022
Book Size: 1/8th Demmy
Binding: Paper Back
Publisher: Aravind India
Description
ಶಿವರಾಮ ಕಾರಂತರ ಬೆಟ್ಟದ ಜೀವ / Shivarama Karantara Bettada Jeeva – ಡಾ. ಶ್ರೀಧರ ಹೆಗಡೆ ಭದ್ರನ್ ಅವರು ಸಂಪಾದಿಸಿರುವ ವಿಮರ್ಶಾ ಲೇಖನಗಳ ಸಂಕಲನ ‘ಶಿವರಾಮ ಕಾರಂತರ ಬೆಟ್ಟದ ಜೀವ’. 1943ರಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲೆಯಿಂದ ಬೆಟ್ಟದ ಜೀವ ಮೊದಲು ಪ್ರಕಟವಾಯಿತು. ಅಂದಿನಿಂದ ಹತ್ತಾರು ಮುದ್ರಣಗಳನ್ನು ಕಂಡಿರುವ, ಹಲವು ಶೈಕ್ಷಣಿಕ ಹಂತಗಳಲ್ಲಿ ಪಠ್ಯಪುಸ್ತಕವಾಗಿ ನಿಯಮಿತವಾಗಿದ್ದ ಬೆಟ್ಟದ ಜೀವ ಇಂದಿಗೂ ತನ್ನ ತಾಜಾತನದಿಂದ ಗಮನ ಸೆಳೆಯುವ ಕೃತಿ. ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದವಾಗಿರುವ ಬೆಟ್ಟದಜೀವ ಹತ್ತಿರ ಹತ್ತಿರ ಎಂಟು ದಶಕಗಳಿಂದ ಚಲಾವಣೆಯಲ್ಲಿರುವ ಕಾದಂಬರಿ. ಇದೇ ಕಾರಣಕ್ಕೆ ಸಹೃದಯರ ಮೆಚ್ಚುಗೆಯೊಂದಿಗೆ ವಿಮರ್ಶಕರ ಚರ್ಚೆಗೂ ನಿರಂತರವಾಗಿ ಇದು ಒಳಗಾಗುತ್ತ ಬಂದಿದೆ. ಕಾರಂತರ ಅನುಭವವಿಶಿಷ್ಟ ದ್ರವ್ಯ ಹದವಾಗಿ ಬೆರೆಚ ಕೃತಿ ಎಂಬುದೇ ಕಾದಂಬರಿಯ ಹೆಗ್ಗಳಿಕೆ. ವಸ್ತು ತಂತ್ರಗಳೊಂದಿಗೆ ಸಾರ್ಥಕ ಪಾತ್ರ ಪ್ರಪಂಚದಿಂದ ಕೂಡಿರುವ ಕಾದಂಬರಿ ಬಾಳನ್ನು ತಿಳಿಯಲು ಬೇಕಾದ ಸಾಧನಗಳನ್ನು ನಿರೂಪಿಸಿದೆ. ಬೆಟ್ಟದಜೀವ ಕಾದಂದಬರಿಯ ಕುರಿತು ಇದುವರೆಗೆ ಹಲವು ದೃಷ್ಟಿಕೋನಗಳ ವಿಮರ್ಶೆ ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಬರೆಹಗಳನ್ನು ಸಂಗ್ರಹಿಸುವುದು ಮತ್ತು ಹೊಸ ತಲೆಮಾರಿನ ವಿಮರ್ಶಕರ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಪ್ರಸ್ತುತ ಪುಸ್ತಕದ ಮೂಲ ಉದ್ದೇಶ ಎಂದಿದ್ದಾರೆ.
