ಷೇರು ಮಾರುಕಟ್ಟೆ / Sheru Marukatte
Author: Rangaswamy Mookanahalli
Pages: 224
Edition: 2024
Book Size: 1/8th Demmy
Binding: Paper Back
Publisher: Sawanna Enterprises
Specification
Description
ಷೇರು ಮಾರುಕಟ್ಟೆ / Sheru Marukatte – ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ಪ್ರಮುಖ ಅಂಶಗಳಾದ ಫಂಡಮೆಂಟಲ್ ಅನಾಲಿಸಿಸ್, ಟೆಕ್ನಿಕಲ್ ಅನಾಲಿಸಿಸ್, ಅಲ್ಗೊ ಟ್ರೇಡಿಂಗ್, ರೋಬೊ ಅಡ್ವೈಸರಿ, ಡಿರೈವೆಟಿಸ್, ಸೆಂಟಿಮೆಂಟಲ್ ಅನಾಲಿಸಿಸ್, ಷೇರುಗಳ ಮೇಲಿನ ತೆರಿಗೆ ನೀತಿಯನ್ನು ಕಟ್ಟಿಕೊಡುವ ಕೃತಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ‘ಷೇರು ಮಾರುಕಟ್ಟೆ’. ಸಮಗ್ರ ಹೂಡಿಕೆ ಮಾರ್ಗದರ್ಶಿಯಾಗಿ ಕೃತಿಯು ಹೊರಹೊಮ್ಮಿದೆ. ಪ್ರೈಮರಿ ಹೂಡಿಕೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಸೆಕೆಂಡರಿ ಮಾರುಕಟ್ಟೆಯಲ್ಲಿನ ಹೂಡಿಕೆ, ಡಿರೈವೆಟಿವ್ಸ್ ಮಾರುಕಟ್ಟೆಯ ಫ್ಯೂಚರ್ ಮತ್ತು ಆಪ್ಷನ್ ಮಾರುಕಟ್ಟೆ ಬಗ್ಗೆ ಕೂಡ ಒಂದಷ್ಟು ತಿಳಿಸುವ ಪ್ರಯತ್ನವಿದೆ. ಹೂಡಿಕೆಯಿಂದ ಬರುವ ಅಪಾಯಗಳೇನು?, ಷೇರುದಾರನ ಹಕ್ಕುಗಳೇನು?, ಷೇರಿನ ಮೇಲಿನ ತೆರಿಗೆ ನೀತಿಯೇನಿದೆ?, ಅಲ್ಗೊ ಟ್ರೇಡಿಂಗ್, ಪಿಎಂಎಸ್, ಸೆಕ್ಯುರಿಟೀಸ್, ಷೇರು ಮಾರುಕಟ್ಟೆ ಟರ್ಮಿನಾಲಜಿಗಳು, ಹೂಡಿಕೆದಾರನ ರಕ್ಷಣೆ, ಅಹವಾಲು, ಪರಿಹಾರದ ತನಕ ಷೇರು ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲು ಬೇಕಾದ ಸಂಪೂರ್ಣ ಮಾಹಿತಿಯನ್ನ ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ.
