ಸಕ್ಕರೆ ಗೊಂಬೆ / Sakkare Gombe

Author: Vivek Shanbhag

Pages: 68

Edition: 2025

Book Size: 1/8th Demmy

Binding: Paper Back

Publisher: Akshara Prakashana

135

In stock

Description

ಸಕ್ಕರೆ ಗೊಂಬೆ / Sakkare Gombe – …’ಸಕ್ಕರೆ ಗೊಂಬೆ’ ಪೂರ್ಣವಾಗಿ ಇಂಥ ಉದ್ಯಮಲೋಕದ ಕೇಂದ್ರದಲ್ಲಿಯೇ ಘಟಿಸುವ ಒಂದು ನಾಟಕ. ಎನ್‌ಕೆ ಎಂದು ಪರಿಚಿತನಾಗಿರುವ ನಂದಕಿಶೋರ ಬಹುದೊಡ್ಡ ಕೈಗಾರಿಕೋದ್ಯಮಿ; ಗೋಮತಿ ಗ್ರೂಪ್ ಎಂದು ಪ್ರಸಿದ್ಧವಾದ ಸಮುಚ್ಚಯದ ಮಾಲಿಕ. ಈತನ ಮಗ ಸಿದ್ಧಾರ್ಥ ಚಿತ್ರಕಾರ; ಆತ ತಂದೆಯ ಪ್ರಭಾವ-ಪ್ರಭಾವಳಿಯ ಪಾಶದಿಂದ ಬಿಡುಗಡೆಯಾಗಬೇಕೆಂದು ಹವಣಿಸುತ್ತಿದ್ದಾನೆ. ಅದಕ್ಕಾಗಿ ಆತ ಈ ನಾಟಕದ ಆರಂಭದಲ್ಲಿಯೇ ಮನೆ ಬಿಟ್ಟು ಬಂದಿದ್ದಾನೆ; ‘ದಿವ್ಯ’ದ ಹುಡುಕಾಟದಲ್ಲಿ ತೊಡಗಿದ್ದಾನೆ. ಇಲ್ಲಿ ಆತನಿಗೆ ಸಿಗುವ ಒಂದು ಸಂದೇಶ ಮತ್ತೆ ಆತನನ್ನು ಮನೆಯ ಕಡೆ ಮುಖಮಾಡಿಸುತ್ತದೆ; ಅಲ್ಲಿ ಆತನನ್ನು ತನ್ನ ತಂದೆಯನ್ನು ಅರಿಯಲು ತೊಡಗುವ ಮನೋಯಾತ್ರೆಯೊಂದರಲ್ಲಿ ನಡೆಸುತ್ತದೆ. ಇಂಥ ಯಾತ್ರೆಯೊಂದರ ತುಣುಕು ನೋಟಗಳೇ ಈ ನಾಟಕದ ದೃಶ್ಯಾವಳಿ…