ಸತ್ತವನು ಎದ್ದು ಬಂದಾಗ / Satthavanu Yeddu Bandaga
Author: Beechi
Pages:97
Edition: 2009
Book Size: 1/8th Demmy
Binding: Paper Back
Publisher: Beechi Prakasahana
Description
ಸತ್ತವನು ಎದ್ದು ಬಂದಾಗ / Satthavanu Yedu Bandaga – ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡಿದ ಸ್ವತಃ ಸೃಜನಶೀಲ ಸಾಹಿತಿಗಳೂ ಆಗಿದ್ದ ಬೀchi ಅವರಿಗೆ ಪತ್ತೇದಾರಿ ಕಾದಂಬರಿಗಳನ್ನು ಕಂಡರೆ ಆಗುತ್ತಿರಲಿಲ್ಲ ಎನ್ನುವುದು ಪರಮಾಶ್ಚರ್ಯದ ಸಂಗತಿ. ’ಸತ್ತವನು ಎದ್ದು ಬಂದಾಗ’ ಕೃತಿಯ ಪ್ರಸ್ತಾವನೆಯಲ್ಲಿ ಖುದ್ದು ಅವರೇ ಪತ್ತೇದಾರಿ ಕಾದಂಬರಿಗಳ ಬಗ್ಗೆ ಮೂಗು ಮುರಿಯುವಂತಹ ಮಾತುಗಳನ್ನು ಆಡಿದ್ದಾರೆ.
ಆದರೆ ಸತ್ತವನು ಎದ್ದು ಬಂದಾಗ ಕೃತಿ ಪತ್ತೇದಾರಿ ಛಾಯೆ ಹೊಂದಿದೆ ಎನ್ನುವುದು ಮತ್ತೊಂದು ಸ್ವಾರಸ್ಯಕರ ಸಂಗತಿ. ಕಾದಂಬರಿಕಾರರೇ ಉಲ್ಲೇಖಿಸಿರುವಂತೆ ಈ ಶೈಲಿಯಲ್ಲಿ ಅವರು ಬರೆದ ಮೊದಲ ಮತ್ತು ಕೊನೆಯ ಕಾದಂಬರಿ ಇದು.
’ನಾನಿಲ್ಲಿ ಕಥಾವಸ್ತುವಾಗಿ ಅಳವಡಿಸಿಕೊಂಡಿರುವ ಘಟನೆಯೂ ನಿತ್ಯ ಜೀವನದಲ್ಲಿ ಕಾಣುವಂತಹದಕ್ಕೆ ಕಾಣುವಂತಹದಾಗಬಾರದು ಕೂಡ ಇಂತಹ ಪಾಪಕೃತ್ಯವು ಸರ್ವಸಾಮಾನ್ಯವಾಗಿಬಿಟ್ಟರೆ, ನಮ್ಮನ್ನು ಕಾಪಾಡುವ ಆ ದೇವನು ತನ್ನನ್ನೂ ತಾನು ಕಾಪಾಡಿಕೊಳ್ಳಲಾರ. ಸಾಹಿತ್ಯವು ಜೀವನದ ‘ಫೋಟೊ’ ಅಲ್ಲ-ಒಂದು ಚಿತ್ರ! ಕ್ಯಾಮರಾದಿಂದ ತೆಗೆದುದಲ್ಲ ಕುಂಚಿನಿಂದ ಬಂದುದು, ಪೆನ್ನಿನಿಂದ ಹರಿದುದು. ಈ ಜಾತಿಯ ನಾಪತ್ತೇದಾರಿ ಕೃತಿಯೂ ಒಂದು ಇರಲಿ ಎಂದು ಬರೆದಿದ್ದೇನೆ ಅಷ್ಟ ಇದೇ ನನ್ನ ಮೊದಲನೆಯ ತಪ್ಪು ಪ್ರಾಯಶಃ ಕಡೆಯದಾದರೂ ಆಶ್ಚರ್ಯವಿಲ್ಲ ದುಖವಿಲ್ಲ’ ಎಂದು ತಮ್ಮದೇ ಹಾಸ್ಯದ ಧಾಟಿಯಲ್ಲಿ ಅವರು ಹೇಳಿದ್ದಾರೆ.
