ಸರ್ಪ ಸಂಬಂಧ / Sarpa Sambandha
Author: Ravi Belagere
Pages:396
Edition: 2024
Book Size: 1/8th Demmy
Binding: Paper Back
Publisher: Bhavana Prakashana
Description
ಸರ್ಪ ಸಂಬಂಧ / Sarpa Sambandha – “ಸರ್ಪ ಸಂಬಂಧ” ರವಿ ಬೆಳಗೆರೆ ಅವರ ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿದೆ. ಇದು ಅವರ “ಮಾಟಗಾತಿ” (Matagathi) ಕಾದಂಬರಿ ಸರಣಿಯ ಎರಡನೇ ಭಾಗವಾಗಿದೆ. ವಿಜ್ಞಾನದ ಸರಹದ್ದಿಗೆ ನಿಲುಕದ, ಭಾರತದ ಕೆಲವು ಕಡೆಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ವಾಮಾಚಾರ, ಮಾಟ, ತಂತ್ರ ವಿದ್ಯೆಗಳ ರಹಸ್ಯಗಳನ್ನು ಈ ಕಾದಂಬರಿಯಲ್ಲಿ ಬಿಚ್ಚಿಡಲಾಗಿದೆ. ಕ್ಷುದ್ರ ಶಕ್ತಿಗಳನ್ನು ಪಡೆಯಲು ಅಘೋರಿ ಸಾಧಕರು ನಡೆಸುವ ಸಾಹಸಗಳು, ಅವರ ಜೀವನಶೈಲಿ ಮತ್ತು ಸಿದ್ಧಿಗಳ ಬಗ್ಗೆ ವಿವರವಾಗಿ ಬರೆಯಲಾಗಿದೆ. ಇದು ಬೆಂಗಳೂರಿನ ಭೂಗತ ಲೋಕದ (underworld) ಕುರಿತಲ್ಲ, ಬದಲಾಗಿ ಅಲೌಕಿಕ ಮತ್ತು ಭಯಾನಕ ಅಧೋಲೋಕದ ಕಥಾಹಂದರವನ್ನು ಹೊಂದಿದೆ. ಬೆಳಗೆರೆ ಅವರ ವಿಶಿಷ್ಟ ಶೈಲಿಯಲ್ಲಿ, ಪ್ರತಿ ಪುಟದಲ್ಲೂ ಕುತೂಹಲ ಕೆರಳಿಸುವ ತಿರುವುಗಳೊಂದಿಗೆ ಕಥೆಯನ್ನು ಹೆಣೆಯಲಾಗಿದೆ, ಇದು ಓದುಗರನ್ನು ಹಿಡಿದಿಡುತ್ತದೆ. ಹಾವುಗಳು ! ಅಬ್ಬಾ ಅವೆಂದರೆ ಯಾರಿಗಿರುವುದಿಲ್ಲ ಹೆದರಿಕೆ ! ಮೂಳೆಯಿಲ್ಲದ ಪ್ರಾಣಿ ಹರಿದಾಡುವುದನ್ನು ನೋಡಿದರೆ ಹೆದರಿ ಅಂಜಿ ನೀರಾಗಿರುತ್ತೇವೆ. ಅಂಥಹ ಸರ್ಪದ ಮೇಲೆ ಚ್ಯುತಿ ಬರದಂತೆ ಇಂಚಿಂಚು ಸಾರಾ ಸಗಟಾಗಿ ವಿವರಿಸಿ, ಪುಸ್ತಕದ ಪುಟ ಪುಟದಲ್ಲು ಒಂದು ತಿರುವು ಕೊಟ್ಟು, ಪುಟ ತಿರುಗಿಸುವಂತೆ ಮಾಡಿದ ಬೆಳೆಗೆರೆ ಅವರ ಆಲೋಚನಾ ಶಕ್ತಿ, ಲೇಖಕನ ಆಂತರ್ಯದಲ್ಲಡಗಿರುವ ಕಲ್ಪನಾ ಲೋಕದ ಸಾಮರ್ಥ್ಯವನ್ನು ಕಣ್ಣೆದುರಿಗಿರಿಸುತ್ತದೆ. ಅಗ್ನಿನಾಥನಂತಹ ಅಘೋರಿ ಸಾಧಕನೊಬ್ಬನು ಮಾಡಿದ ಸಾಹಸ , ಅವನ ಸಿಧ್ಧಿಗಳು, ಅಘೋರಿಗಳ ಜೀವನ ಇವೆಲ್ಲವನ್ನು ಅಣು ಅಣುವಾಗಿ ಬಿಚ್ಚಿಟ್ಟಿದ್ದಾರೆ.
