ಸಾಹಿತ್ಯ ಅಧ್ಯಯನದ ನೆಲೆಗಳು / Sahithya Adhyayanadha Nelegalu
Author: P. Chandrika
Pages: 286
Edition: 2017
Book Size: 1/8th Demmy
Binding: Paper Back
Publisher: Abhinava
Description
ಸಾಹಿತ್ಯ ಅಧ್ಯಯನದ ನೆಲೆಗಳು / Sahitya Adhyayanadha Nelegalu – ಪುಸ್ತಕವನ್ನು ಪಿ. ಚಂದ್ರಿಕಾ ಅವರು ಸಂಪಾದಿಸಿದ್ದಾರೆ. ಯಾವ ರೀತಿಯಲ್ಲಿ ಸಾಹಿತ್ಯವನ್ನು ಅಧ್ಯಯನ ಮಾಡಬೇಕು? ಒಂದು ಕಥೆ, ಕವಿತೆ, ಕಾವ್ಯವನ್ನು ಓದುವುದು, ಅದನ್ನು ನಮ್ಮೊಳಗೆ ಇಳಿಸಿಕೊಳ್ಳುವುದು ಹೇಗೆ? ಸಾಹಿತ್ಯಕೃತಿಯ ಓದಿಗೊಂದು ಸಿದ್ದತೆ, ತಿರುಳನ್ನು ಅರಿಯಲು ಪರಿಕರಗಳು ಅಗತ್ಯ. ಜತೆಗೆ ಅಧ್ಯಯನದ ನೆಲೆಯೂ ಸಾಹಿತ್ಯ ಇರಬೇಕು.ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿದ ಪಠ್ಯಗಳೆಲ್ಲವೂ ಘನಗಂಭೀರ. ಈ ಮಧ್ಯೆ, ಸಾಹಿತ್ಯಾಸಕ್ತರು, ಸಾಹಿತ್ಯ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಪಿ.ಚಂದ್ರಿಕಾ ಅವರು ‘ಸಾಹಿತ್ಯ ಅಧ್ಯಯನದ ನೆಲೆಗಳು’ ಕೃತಿಯನ್ನು ಸಂಪಾದಿಸಿದ್ದಾರೆ.ಸಾಹಿತ್ಯ ಅಧ್ಯಯನ ಮತ್ತು ಇತರ ಶೈಕ್ಷಣಿಕ ಶಿಸ್ತುಗಳ ಬಗ್ಗೆ ಎಚ್.ಎಸ್.ರಾಘವೇಂದ್ರರಾವ್, ಸಾಹಿತ್ಯ ಮತ್ತು ಮನಃಶಾಸ್ತ್ರ ಕುರಿತಾಗಿ ಎಂ.ಬಸವಣ್ಣ ಕನ್ನಡ ಸಾಹಿತ್ಯದಲ್ಲಿ ಮನಃಶಾಸ್ತ್ರದ ಅಂಶಗಳ ಬಗ್ಗೆ ಟಿ.ಪಿ.ಆಶೋಕ ಅವರ ಲೇಖನಗಳಿವೆ.
