ಸೂಫಿ ಕಥಾಲೋಕ / Sufi Kathaloka
Author:Prof. B Gangadhararamurthy
Pages:360
Edition: 2020
Book Size: 1/8th Demmy
Binding: Paper Back
Publisher:Ladai Prakashana
Description
ಸೂಫಿ ಕಥಾಲೋಕ / Soofi Kathaloka -ಪ್ರೊ. ಬಿ. ಗಂಗಾಧರಮೂರ್ತಿ ಅವರು ಹೊರತಂದಿರುವ ’ಸೂಫಿ ಕಥಾಲೋಕ’ ಒಂದು ನೂರು ಸೂಫಿ ಕತೆಗಳ ಅಪೂರ್ವ ಸಂಕಲನವಾಗಿದೆ.
ಕನ್ನಡದ ಮಟ್ಟಿಗೆ ಬಂದಿರುವ ಸೂಫಿ ಕತೆಗಳ ಅನುವಾದಗಳಲ್ಲೇ ಇದು ವಿಶೇಷವಾದ ಕೃತಿ, ಈ ಕತೆಗಳು ಅನುವಾದ ಎನ್ನುವುದಕ್ಕಿಂತ ನಮ್ಮ ನಡುವೆಯೇ ಹುಟ್ಟಿಬಂದವುಗಳೇನೋ ಎನ್ನುವಂತೆ ಇವೆ. ಲೇಖಕರು ಎಲ್ಲೂ ತಡೆಯಿರದಂತೆ ಓದುವ ರೀತಿಯಲ್ಲಿ ಅವುಗಳ ಬಹುಸ್ತರೀಯತೆಯ ಸೂಕ್ಷ್ಮವು ಹಾಳಾಗದಂತೆ ಸಹಜವಾಗಿ ಅನುವಾದಿಸಿದ್ದಾರೆ.ಇವರ ಭಾವಾನುವಾದದಲ್ಲಿ ಸೂಫಿಗಳು ವಿದೇಶಿ ಪ್ರವಾಸಿಗಳಂತೆ ಕಾಣಿಸದೆ ಬೆಡಗಿನ ವಚನಗಳ ಅನುಭಾವಿಗಳಂತೆ ಕಾಣಿಸುತ್ತಾರೆ.
ಲೇಖಕರ ಸಾಹಿತ್ಯದ ಪ್ರೇಮ, ಜೊತೆಗೇ ಅವರಲ್ಲಿ ಸದಾ ಜಾಗೃತವಾಗಿರುವ ರಾಜಕೀಯ ಸಾಂಸ್ಕೃತಿಕ ಒತ್ತಾಸೆಗಳು ಈ ಕಥೆಗಳನ್ನು ಹಿಡಿದಿಟ್ಟಿವೆ. ಜೊತೆಗೇ ಅವರು ಪ್ರೀತಿಸುವ ಓದುಗರು ಹೇಳುವಂತೆಯೂ ಮಾಡಿವೆ. ಬೈಬಲ್, ಕುರಾನ್ , ಭಗವದ್ಗೀತೆ, ಪರಮಹಂಸರ ಕಥಾಮೃತ-ಈ ಎಲ್ಲವೂ, ಹುಬ್ಬುಗಟ್ಟಿದ ಮತನಿಷ್ಠೆಯ ಅಗತ್ಯವೇ ಇಲ್ಲದಂತೆ, ಈ ಸೂಫಿಕತೆಗಳಲ್ಲಿ ಸುಮ್ಮನೇ ಒದಗಿಬಿಡುವ ಸರಳತೆಯನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವಂತೆ ಮಾಡುತ್ತದೆ.
ಸಮಾಜದ ಎಲ್ಲಾ ವಿದ್ಯಮಾನಗಳನ್ನು ಹಳದಿ ಕಣ್ಣಿಂದ ನೋಡಿ, ತೋರಿಸಿ ಅದರ ಬಹುತ್ವ ಮತ್ತು ಸೆಕ್ಯುಲರ್ ಮೂಲಸತ್ವವನ್ನು ನಾಶಮಾಡುವ ಪ್ರವೃತ್ತಿ ಬಲವಾಗುತ್ತಿದೆ. ಸೂಫಿ ಕತೆಗಳ ಅದ್ಭುತ ಲೋಕವನ್ನು ಪರಿಚಯಿಸುವ, ನೆನಪಿಸುವ ಮೂಲಕ ಈ ಮೂಲಸತ್ವವನ್ನು ಉಳಿಸುವ ಪ್ರಯತ್ನಕ್ಕೆ ಕೈಜೋಡಿಸಿದಂತಾಗಿದೆ. ಈ ಪುಸ್ತಕದ ಪ್ರಕಟಣೆ ಅತ್ಯಂತ ಪ್ರಸ್ತುತವಾಗಿದೆ.
