ಶ್ರೀ ರಾಮಾನುಜ / Sri Ramanuja
ಶ್ರೀ ರಾಮಾನುಜ / Sri Ramanuja Original price was: ₹150.Current price is: ₹127.
Back to products
ಕೇಶವ ಬಲಿರಾಮ ಹೆಗಡೆವಾರ್ / Keshava Balirama Hegdewar
ಕೇಶವ ಬಲಿರಾಮ ಹೆಗಡೆವಾರ್ / Keshava Balirama Hegdewar Original price was: ₹50.Current price is: ₹42.

ಸ್ಟಾಕ್ ಮಾರ್ಕೆಟ್ ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ? / Stock Marketnalli Sampattu Srustisuvudu Hege?

Author: Keshav Prasad B

Pages: 208

Edition: 2025

Book Size: 1/8th Demmy

Binding: Paper Back

Publisher: Sneha Book House

Specification

Original price was: ₹250.Current price is: ₹225.

In stock

Description

ಸ್ಟಾಕ್ ಮಾರ್ಕೆಟ್ ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ? / Stock Marketnalli Sampattu Srustisuvudu Hege? – ಪ್ರತಿಯೊಬ್ಬರ ಜೀವನದಲ್ಲಿಯೂ ‘ಖರ್ಚು-ಉಳಿತಾಯ-ಹೂಡಿಕೆ’ ಎಂಬ ಮೂರು ಲೆಕ್ಕಾಚಾರಗಳು ಬಂದೇ ಬರುತ್ತವೆ. ಬದುಕಿನಲ್ಲಿ ಸಿರಿ ಸಂಪತ್ತು ವೃದ್ಧಿಸಬೇಕಿದ್ದರೆ, ಶ್ರೀಮಂತರಾಗಿ ನಮ್ಮ ಕನಸುಗಳನ್ನು ನನಸುಗೊಳಿಸಬೇಕಿದ್ದರೆ, ಬದುಕನ್ನು ಹಸನುಗೊಳಿಸಬೇಕಿದ್ದರೆ, ಸರಿಯಾದ ರೀತಿಯಲ್ಲಿ ಹೂಡಿಕೆಯನ್ನು ಮಾಡಲೇಬೇಕು. ಈ ಹಿಂದೆ ಸಾಂಪ್ರದಾಯಿಕವಾಗಿ ಅಂಚೆ ಇಲಾಖೆಯ ಸಣ್ಣ ಉಳಿತಾಯ, ಬ್ಯಾಂಕ್ಗಳ ನಿಶ್ಚಿತ ಠೇವಣಿ, ಚಿನ್ನ, ಬೆಳ್ಳಿ, ಸೈಟ್, ಮನೆ, ಜಮೀನುಗಳಲ್ಲಿ ಜನ ಹೂಡಿಕೆ ಮಾಡುತ್ತಿದ್ದರು. ಆದರೆ ಹೆಚ್ಚುತ್ತಿರುವ ಹಣದುಬ್ಬರದ ಎದುರು ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಸಿಗುವ ಆದಾಯ ಕಡಿಮೆಯಾಗಿದೆ. ಆದ್ದರಿಂದ ಷೇರು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಜನರನ್ನು ಅತ್ಯಂತ ಆಕರ್ಷಿಸುತ್ತಿದೆ. ಉದಾಹರಣೆಗೆ ಭಾರತದಲ್ಲಿ 2024ರ ಒಂದೇ ವರ್ಷದಲ್ಲಿ 4 ಕೋಟಿ 60 ಲಕ್ಷಕ್ಕೂ ಹೆಚ್ಚು ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ! ಮ್ಯೂಚುವಲ್ ಫಂಡ್ ಸಿಪ್ ಮೂಲ ಪ್ರತಿ ತಿಂಗಳು 25-26 ಸಾವಿರ ಕೋಟಿ ರುಪಾಯಿ ಷೇರು ಮಾರುಕಟ್ಟೆಗೆ ಹರಿದು ಬರುತ್ತಿದೆ! ಆದರೆ ಷೇರುಗಳಲ್ಲಿ ಹೂಡಿಕೆಗೆ ಮುನ್ನ ಅದರ ಬಗ್ಗೆ ಜ್ಞಾನವನ್ನು ಗಳಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ‘ಸ್ಟಾಕ್ ಮಾರ್ಕೆಟ್ನಲ್ಲಿ ಸಂಪತ್ತು ಸೃಷ್ಟಿಸುವುದು ಹೇಗೆ?’ ಕೃತಿಯನ್ನು ತಪ್ಪದೆ ಓದಿರಿ! ಕೋಟಿಗಳ ಲೆಕ್ಕದಲ್ಲಿ ಗಳಿಸಿ!

-ಕೇಶವ ಪ್ರಸಾದ್ ಬಿ.