ಸ್ವಪ್ನ ಸಂಭ್ರಮ / Swapna Sambrama
Author: Saisuthe
Pages:168
Edition: 2020
Book Size: 1/8th Demmy
Binding: Paper Back
Publisher: Sudha Enterprises
Specification
Description
ಸ್ವಪ್ನ ಸಂಭ್ರಮ / Swapna Sambrama -ಮಾತಿನ ಬದಲು ಮೌನವೇ ತನ್ನ ಸಾಮ್ರಾಜ್ಯ ಸ್ಥಾಪಿಸಿಬಿಡುತ್ತದೆ. ಆದರೆ ಅದರ ಅಧಿಪತ್ಯಕ್ಕೆ ಒಡೆಯರು ಯಾರು?ಅದು ಹೇಗೆ? ಅನುಮಾನ ಹೆಚ್ಚಾಗಿ ಸ್ವಾರ್ಥದ ಮೊಳಕೆಯೊಂದು ಚಿಗುರಿಬಿಟ್ಟರಂತೂ ಅಲ್ಲಿಗೆ ಮುಗಿದೇ ಹೋಯಿತು.ಅದು ಕೊಂಡೊಯ್ಯುವ ದಾರಿಯಲ್ಲಿ ಬರೀ ಕಲ್ಲು ಮುಳ್ಳೇ ತುಂಬಿರುತ್ತದೆ.ಇಂತಹುದೇ ಒಂದು ಪ್ರಸಂಗವನ್ನು ಆಧಾರವಾಗಿಟ್ಟುಕೊಂಡು ಹೆಣೆದ ಈ ಕಾದಬರಿ”ಸ್ವಪ್ನ ಸಂಭ್ರಮ”.ನಾಯಕನ ಪಟ್ಟ ಕಟ್ಟಬಹುದಾದ ಶ್ರೀವಾಸ್ತವರು ಚಾರುಲತಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಅನ್ಯಾಯ ಮಾಡಿದರೆಂದು ಒಂದು ಕ್ಷಣ ಅನ್ನಿಸಿದರೂ ಕೂಡ ಮರುಕ್ಷಣವೇ ಅದನ್ನು ಮನ ಒಪ್ಪುವುದಿಲ್ಲ.ಅದನ್ನು ಓದುವ ನಾವು ಒಪ್ಪದೇ ಇರುವುದೇನು ಸ್ವತಃ ಅನ್ಯಾಯಕ್ಕೆ ಒಳಗಾದ ಚಾರುಲತ ಭಾಸ್ಕರ್ ರವರೇ ಒಪ್ಪುವುದಿಲ್ಲ ಅಥವಾ ಅದನ್ನು ತೋರ್ಪಡಿಸಿಕೊಳ್ಳದಂತಹ ಸರಳತೆ ಮೃದುಸ್ವಭಾವ. ಇದು ಎಷ್ಟರಮಟ್ಟಿಗೆ ಸರಿ? ನಮಗೇ ಆದ ಅನ್ಯಾಯವನ್ನು ಎತ್ತಿ ಆಡದಂತಹ ಸಾತ್ವಿಕತೆ,ಸಜ್ಜನಿಕೆ,ಇದು ಸ್ವಲ್ಪಮಟ್ಟಿಗೆ ಹೆಚ್ಚೆ ಅನಿಸಿದರು,ಹಲವು ವಿಷಯಗಳನ್ನು ನಮಗೆ ಮನವರಿಕೆ ಮಾಡಿಕೊಡುವಲ್ಲಿ ಈ ಕೃತಿಯೂ ಯಶಸ್ವಿಯಾಗಿದೆ.
