ಹಂತಕೀ ಐ ಲವ್ ಯೂ! / Hanthaki I Love You!

Author: Ravi Belagere

Pages: 90

Edition: 2025

Book Size: 1/8th Demmy

Binding: Paper Back

Publisher: Bhavana Prakashana

Original price was: ₹120.Current price is: ₹108.

In stock

Description

ಹಂತಕೀ ಐ ಲವ್ ಯೂ! / Hantaki I Love You! – ರವಿ ಬೆಳಗೆರೆಯವರ ಲೇಖನಿಯಿಂದ ಮೂಡಿ ಬಂದಂತಹ ಕಾಲ್ಪನಿಕ ಕಾದಂಬರಿಯಿದು. ಇದನ್ನು ತನಿಖಾ ಕಾದಂಬರಿಯೆಂದು ಕರೆದರೆ ತಪ್ಪಾಗಲಾರದು. ಪಾಲಿ ಎಂಬ ಪೊಲೀಸ್ ಅಧಿಕಾರಿ ನಡೆಸುವ ಕೊಲೆ ಪ್ರಕರಣದ ತನಿಖೆಯ ಸುತ್ತ ಈ ಕಾದಂಬರಿಯ ಕಥಾಹಂದರ ಸಾಗುತ್ತದೆ. ತನಿಖಾ ಕಥಾ ವಸ್ತುವನ್ನು ಇಷ್ಟ ಪಡುವ ಓದುಗರಿಗೆ ರೋಚಕತೆಯೊಂದಿಗೆ ಓದಿಸಿಕೊಂಡು ಹೋಗುವ ಕಾದಂಬರಿ ಇದು. ಕೇವಲ ತನಿಖೆಯಷ್ಟೇ ಅಲ್ಲದೇ, ಒಂದು ಸುಂದರವಾದ ಪ್ರೀತಿಯ ಎಳೆಯನ್ನು ಕೂಡ ಈ ಪುಸ್ತಕದಲ್ಲಿ ರವಿ ಬೆಳಗೆರೆ ಹೆಣೆದಿದ್ದಾರೆ. ಪ್ರೇಮದೊಂದಿಗೆ ಮಿಳಿತವಾಗಿರುವ ತನಿಖೇಯ ದಿಕ್ಕುಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಈ ಪುಸ್ತಕ ಬರೆಯಲ್ಪಟ್ಟಿದೆ. ಕೊಲೆಯ ಜಾಡನ್ನು ಹಿಡಿದು ಹೊರಟ ಇನ್ಸ್ಪೆಕ್ಟರ್ ಪಾಲಿ ಯಾವ ರೀತಿ ಹಂತಕಿಯನ್ನು ಪತ್ತೆ ಹಚ್ಚುತ್ತಾರೆ ಕುತೂಹಲ ಮೊದಲಿನಿಂದ ಕೊನೇಯವರೆಗೂ ಓದಿಸಿಕೊಂಡು ಹೋಗುತ್ತದೆ. ಕಥೆಯನ್ನು ಅನಗತ್ಯವಾಗಿ ಹಿಗ್ಗಿಸದೇ, ಎಷ್ಟು ಬೇಕೋ ಅಷ್ಟರಲ್ಲೇ ಅಚ್ಚುಕಟ್ಟಾಗಿ ಬರೆದು ಮುಗಿಸಿದಂತಹ ಕಾದಂಬರಿಯಿದು. ಹೊಸ ಓದುಗರಿಗೆ ಕ್ರೈಂ ಕಾದಂಬರಿಗಳಲ್ಲಿ ಆಸಕ್ತಿ ಹುಟ್ಟಲು ಈ ಕಾದಂಬರಿ ಬಹಳಷ್ಟು ಸಹಕಾರಿ.