ಕಾಡು ಪ್ರತಿಭೆ ಮಾರಪ್ಪ / Kadu Prathibhe Marappa
ಕಾಡು ಪ್ರತಿಭೆ ಮಾರಪ್ಪ / Kadu Prathibhe Marappa Original price was: ₹170.Current price is: ₹153.
Back to products
ಸುಖಾಯಣ / Sukhayana
ಸುಖಾಯಣ / Sukhayana Original price was: ₹200.Current price is: ₹180.

ಹರಿವು / Harivu

Author:Kiran Hirisave

Pages:118

Edition: 2025

Book Size: 1/8th Demmy

Binding: Paper Back

Publisher: Kadamba Prakashana

Original price was: ₹150.Current price is: ₹135.

In stock

Description

ಹರಿವು / Harivu -‘ಹರಿವು’ ನಮ್ಮ ಪರಂಪರೆಯ ಪರಿಚಯದ ಜೊತೆಗೆ ವಿಜ್ಞಾನದ ವಿವರಗಳನ್ನೂ ಒಳಗೊಂಡು ಸಹೃದಯನ ಮನವನ್ನು ತಟ್ಟುತ್ತದೆ. ಕಥಾನಾಯಕಿ ನಿರ್ಮಲಾ ನಿರ್ಮಲವಾದ ತರಂಗಿಣಿಯಂತೆಯೇ ಶೋಭಿಸುತ್ತಾಳೆ. ಸಹಜವಲ್ಲದ ತಾಯ್ತನವು ಕೊಡುವ ಒಳತುಮುಲಗಳ ಪ್ರವಾಹ ಇಲ್ಲಿ ಗಂಗೆಯಂತೆಯೇ ಹರಿದು ಇರುಳ ನಡುವೆ ಬೆಳಕ ಅರಸಿ ಹೋಗುವ ಹೆಣ್ತನದ ಹುರುಳು ಅರಳಿದೆ.

ಇತ್ತೀಚಿನ ಬರಹಗಾರರಲ್ಲಿ ಕಣ್ಣರಳಿಸಿ ನೋಡಬಹುದಾದ ಪ್ರತಿಭಾವಂತ ಶ್ರೀಯುತ ಕಿರಣ್ ಹಿರಿಸಾವೆರವರ ‘ಹರಿವು’ ಕತೆ ನದಿಯ ಪ್ರತಿಮೆಯೊಂದಿಗೆ ಸಾಕಷ್ಟು ಕಾಲ ಓದುಗರ ಮನದಲ್ಲಿ ನೆಲೆ ನಿಲ್ಲುತ್ತದೆ. ಎಲ್ಲರೂ ಈ ಕೃತಿಯನ್ನು ಕೊಂಡು ಓದಿ ಕಿರಣ್ ಹಿರಿಸಾವೆಯಂತಹ ಅದ್ಭುತ ಬರಹಗಾರರನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ. ಒಳಿತಾಗಲಿ.