ಹಳ್ಳ ಬಂತು ಹಳ್ಳ / Halla Bantu Halla
Author: Shrinivasa Vaidya
Pages: 310
Edition: 2023
Book Size: 1/8th Demmy
Binding: Paper Back
Publisher: Manohara Grantha Mala
Description
ಹಳ್ಳ ಬಂತು ಹಳ್ಳ / Halla Bantu Halla – ‘ಹಳ್ಳ ಬಂತು ಹಳ್ಳ’ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಅವರ ಜನಪ್ರಿಯ ಕಾದಂಬರಿ ಈ ಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ’ ಲಭಿಸಿದೆ. ಓದು ಒಂದು ತ್ರಾಸದಾಯಕ ಅನುಭವೆನ್ನಿಸುವ ಇತ್ತೀಚಿನ ದಿನಗಳಲ್ಲಿ ಶ್ರೀನಿವಾಸ ವೈದ್ಯರ ಈ ಕಾದಂಬರಿ ಭಿನ್ನವಾಗಿದ್ದು, ಉಲ್ಲಾಸಕರ ಓದಿನ ಅನುಭವ ನೀಡುತ್ತದೆ ಎನ್ನುತ್ತಾರೆ ಹಿರಿಯ ಸಾಹಿತಿ ಮತ್ತು ವಿಮರ್ಶಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ. ವೈದ್ಯರು ಸೊಗಸಾದ ಕಥೆ ಹೇಳುತ್ತಾರೆ. ಅವರ ಕಥನಶಕ್ತಿ ವಾಸ್ತವವಾದಿ ಪರಂಪರೆಯ ಉತ್ತಮ ಕೃತಿಗಳನ್ನು ನೆನಪಿಗೆ ತರುತ್ತವೆ. ‘ಹಳ್ಳ ಬಂತು ಹಳ್ಳ’ ಕಮಲಾಚಾರ್ಯರ ಕುಟುಂಬರ ಕತೆ ಹೇಳಿದರೂ ಈ ಕುಟುಂಬದ ಕತೆಯ ಜೊತೆ ದೇಶದ ಕತೆಯೂ ಸೇರಿಕೊಳ್ಳುತ್ತದೆ. ಇದು ಸಾಮಾಜಿಕ ಪಲ್ಲಟದ ಸಂಕಲನವೂ ಆಗುವುದರ ಮೂಲಕ ಕಾದಂಬರಿ ಬಹುಮುಖಿ ಆಯಾಮ ಪಡೆದುಕೊಳ್ಳುತ್ತದೆ. ಸಂಪ್ರದಾಯದ ಪ್ರಧಾನ ಧಾಟಿಯ ಬದುಕು ದುರ್ಬಲಗೊಂಡು ನಂತರದ ಬದುಕಿನ ಸಾಧ್ಯತೆಗಳನ್ನು ಅನ್ವೇಷಿಸುವ ಕಾದಂಬರಿ ಸಾರ್ಥಕ ಬದುಕಿನ ಸಾಧ್ಯತೆಗಳನ್ನು ಅನ್ವೇಷಿಸುವ ಕಾದಂಬರಿ ಸಾರ್ಥಕ ಬದುಕಿನ ಧಾರಣ ಶಕ್ತಿಯನ್ನು ಕುರಿತಂತೆ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ.
