ಹಿಮಗಿರಿಯ ಗರ್ಭದಲ್ಲಿ / Himagiriya Garbhadalli
Author: Ravi Belagere
Pages:104
Edition: 2024
Book Size: 1/8th Demmy
Binding: Paper Back
Publisher: Bhavana Prakashana
Description
ಹಿಮಗಿರಿಯ ಗರ್ಭದಲ್ಲಿ / Himagiriya Garbhadalli – “ಹಿಮಗಿರಿಯ ಗರ್ಭದಲ್ಲಿ” ಎಂಬುದು ರವಿ ಬೆಳಗೆರೆ ಅವರು ಬರೆದ అరుణಾಚಲ ಪ್ರದೇಶದ ಪ್ರಯಾಣದ ಬಗೆಗಿನ ಪುಸ್ತಕವಾಗಿದೆ. ಇದು ಹಿಮಾಲಯದ ಗರ್ಭದಲ್ಲಿರುವ ಸುಂದರ ಪ್ರದೇಶದ ಒಂದು ಪ್ರಯಾಣ ಅನುಭವವನ್ನು ವಿವರಿಸುತ್ತದೆ.ಈ ಒಂದು ಪ್ರಸ್ತಕಕ್ಕಾಗಿ ತುಂಬ ಆಸೆಪಟ್ಟಿದ್ದೆ, ಬ್ರಿಗೇಡಿಯರ್ ಜೆ.ಪಿ. ದಳವಿ ಎಂಬ ಧೀರ ಅಧಿಕಾರಿ ಬರೆದ ಪುಸ್ತಕವದು, ‘ಹಿಮಾಲಯನ್ ಬ್ಲಂಡರ್ ಅಂತ: 1962ರಲ್ಲಿ ಚೀನಾ ಸೈನ್ಯ ಭಾರತವನ್ನು ಸೋಲಿಸಿ ರೋಹಟ ಮಾಡಿದುದರ ಕಥೆಯಿದು. ”ಈ ಪುಸ್ತಕ ಓದಿದ ನಂತರ ಬಂದರೆ ನಿಂಗೆ ಅರುಗಾಚಲ್ ಪ್ರದೇಶ್ ಸ್ಕೋ ಅರ್ಥವಾಗದೆ’ ಅಂದಿದ್ದ ಡಾ. ಮುರಳಿ, ನನ್ನ ನಹೀಬು ಬೊಟ್ಟಿತ್ತು. ಪುಸ್ತಕ ಕಡೆಗೂ ಸಿಗಲಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಮುಗಿಸಿ ಬಂದರೂ ಒಂದು ದಿನ ಹೀಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಹೋದೆ, ಅಲ್ಲಿ ಪುಸ್ತಕ ಮಾರುವ ವೃದ್ಧರೊಬ್ಬರು ಇದ್ದರು. ಎದ್ದು ಹೋಗೋ ಮಾತು ಬಿದ್ದು ಹೋಗಲಿ ಅಂತ ‘ಹಿಮಾಲಯನ್ ಬ್ಲಂಡರ್’ ಇದೆಯಾ? ಅಂದೆ. ‘ತಗೊ ಅಂತ ಮೂಲೆಯಿಂದ ತೆಗೆದು ಕೊಟ್ಟೇಬಿಟ್ಟರು. ಪುಸ್ತಕ ಸಿಕ್ಕ ಭಯಂಕರ ಖುಷಿಯಲ್ಲಿ ರೂಮಿಗೆ ಬಂದರೆ ಮತ್ತೊಂದು ‘ತ್ರಿಲ್’ ಕಾದಿತ್ತು. ಪುಸ್ತಕದ ಮೊದಲ ಹಾಳೆಯ ಮೇಲೆ ಪುಸ್ತಕದ ಕರ್ತೃ ಬ್ರಿಗೇಡಿಯರ್ ಜೆ.ಪಿ. ದಳವಿ ಅವರ ಮುದ್ದಾದ ಕೈ ಬರಹ, ಸಹಿ ಕಂಡು ಕಣ್ಣುಂಬಿ ಬಂದವು. ಅಂದಹಾಗೆ ನನ್ನ ಈ ಅರುಣಾಚಲ ಪ್ರದೇಶದ ಯಾತ್ರೆ ಪೂರ್ಣವಾಗುವುದೇ ಬ್ರಿಗೇಡಿಯರ್ ದಳವಿ ಅವರ ಪುಸ್ತಕದಿಂದ.
