ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು / Himalaya Rishigala Divya Sandeshagalu
Author: Guru Sakalamaa
Pages:336
Edition: 2024
Book Size: 1/8th Demmy
Binding: Paper Back
Publisher: Guru Sakalamaa
Description
ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು / Himalaya Rushigala Divya Sandeshagalu -ಆಧ್ಯಾತ್ಮಿಕ ತತ್ತ್ವ ಮತ್ತು ಸಾಧನೆಗಳ ಹಿಂದಿರುವ ರಹಸ್ಯಗಳನ್ನು ಗುರು ಸಕಲಮಾ ಅವರು ಸರಳವಾಗಿ, ನೇರವಾಗಿ, ಎಲ್ಲರ (ಸಾಧಕರ ಮತ್ತು ಸಾಮಾನ್ಯರ) ಮನಮುಟ್ಟುವಂತೆ ವಿವರಿಸಿದ್ದಾರೆ. ಸಾಮಾನ್ಯರು ಇದನ್ನು ಓದಲು ಶುರುಮಾಡಿದಾಗ “ಇದೊಂದು ರೋಚಕವಾದ ಕಥೆ” ಎಂದುಕೊಂಡರೂ, ಪುಸ್ತಕದ ಕಡೆಯ ಭಾಗಕ್ಕೆ ಬಂದಾಗ ತಾವೂ ಅಧ್ಯಾತ್ಮ ಸಾಧನೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಬೇಕು ಎಂದು ಅಂದುಕೊಳ್ಳದೇ ಇರುವುದಿಲ್ಲ. ಅದೇರೀತಿ ಸಾಧಕರಾದವರು ತಾವು ಇನ್ನೂ ಹೆಚ್ಚು ತೀವ್ರವಾಗಿ ಸಾಧನೆಯನ್ನು ಮಾಡಬೇಕು ಎಂಬ ಪ್ರೇರಣೆಯನ್ನು ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಅಂತೆಯೇ ಸಿದ್ಧಿಗಳ ಹಿಂದೆ ಹೋದ ಸಾಧಕರಿಗೆ ಅವುಗಳ ಮೋಹದಿಂದ ದೂರಾಗಿ “ಮೋಕ್ಷ”ವೇ ನಿಜವಾದ ಸಿದ್ಧಿ ಎಂದು ಅರ್ಥಮಾಡಿಸುವುದರಲ್ಲಿ ಗುರು ಸಕಲಮಾ ಅವರು ತಮ್ಮ ನುಡಿ-ನಡೆಗಳಿಂದ ಯಶಸ್ವಿಯಾಗಿದ್ದಾರೆ. ನಾವು ಶರಣಾಗತಿಯನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬುದನ್ನು ಉಪದೇಶದ ರೀತಿಯಲ್ಲಿ ಹೇಳದೇ, “ತಮ್ಮೆಲ್ಲ ಅನುಭವಗಳೂ ಗುರು-ಋಷಿ-ಮುನಿಗಳು ತಮ್ಮ ಮೂಲಕ ಲೋಕಕ್ಕೆ ಕೊಟ್ಟಿರುವ ಸಂದೇಶಗಳೇ ಹೊರತು ತಮ್ಮ ಸಾಧನೆ-ಸಿದ್ಧಿಗಳು ಇದರಲ್ಲಿ ಎಳ್ಳಷ್ಟೂ ಇಲ್ಲ” ಎಂದು ಹೇಳುವ ಮೂಲಕ ನಮಗೆ ತೋರಿಸಿಕೊಟ್ಟಿರುವ ರೀತಿ ಮನಮುಟ್ಟುತ್ತದೆ. “ನಾನು” ಎಂಬುದನ್ನು ಸಂಪೂರ್ಣವಾಗಿ ಲಲಿತಾಂಬಿಕೆಗೆ ಸಮರ್ಪಿಸಿರುವ ಗುರು ಸಕಲಮಾರವರು ಈ ಕಾರಣಕ್ಕಾಗಿಯೇ ಪ್ರೇಮವೇ ಮೂರ್ತಿವೆತ್ತಂತಿರುವ ಸರಳತೆಯ ಪ್ರತೀಕವಾಗಿದ್ದಾರೆ ಎಂಬ ಅರಿವು ಕಡೆಯಲ್ಲಿ ಓದುಗನಿಗೆ ಉಂಟಾಗುತ್ತದೆ. ಇದೇ ಈ ಪುಸ್ತಕವನ್ನು ಓದುವ ದಿವ್ಯಾನುಭವ.
ಆಧ್ಯಾತ್ಮಿಕ ಸಾಧಕರೆಲ್ಲರೂ ಓದಲೇಬೇಕಾದ ಪುಸ್ತಕ: “ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು: ಸಕಾಲಿಕ ಮತ್ತು ಕಾಲಾತೀತ”.
