ಹುಡುಗಿಯರಿಗೆ ಮಾತ್ರ / Hudugiyarige Maathra
Author: Raja Chendur
Pages:60
Edition: 2012
Book Size: 1/8th Demmy
Binding: Paper Back
Publisher: Sudha Enterprises
Description
ಹುಡುಗಿಯರಿಗೆ ಮಾತ್ರ / Hudugiyarige Maathra -ಇದೊಂದು ಪುಟ್ಟ ಕಥಾ ಸಂಕಲನ, ಒಂಬತ್ತು ವಿಭಿನ್ನ ಕತೆಗಳನ್ನು ಒಳಗೊಂಡಿರುವ ಸಣ್ಣ ಪುಸ್ತಕ. ಕಮೀಷನರ್ ಕುಮಾರ್ ಅವರು ಅದೇ ಆಫೀಸಿನಲ್ಲಿ ಎಫ್.ಡಿ.ಸಿ. ಆಗಿ ಕೆಲಸ ಮಾಡುತ್ತಿರುವ ಪುರುಷೋತ್ತಮ್ ಅವರನ್ನು ಕರೆಸುತ್ತಾನೆ. ಕಮೀಷನರ್ ತನ್ನನ್ನು ಕರೆಸಿದ ಕಾರಣವೇನಿರಬಹುದು ಎಂದು ಪುರುಷೋತ್ತಮ್ ಗಾಬರಿಯಾಗುತ್ತಾನೆ. ಜೀಪಿನಲ್ಲಿ ಹೋಗುವಾಗ ತನ್ನ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಿದ ಕುಮಾರ್ ತನ್ನ ಹಳೆ ಪ್ರೇಯಸಿ ಸರೋಜ ಗೊತ್ತಾ ಎಂದು ಕೇಳಿದಾಗ ಪುರುಷೋತ್ತಮ ಬೆಚ್ಚಿ ಬಿಳುತ್ತಾನೆ. ಕುಮಾರ್‌ಗೆ ಸರೋಜಮ್ಮನ ಪರಿಚಯವಿದೆಯೇ? ಸರೋಜಮ್ಮನಿಗೆ ಮತ್ತು ಕುಮಾರ್‌ಗೆ ಇರುವ ಸಂಬಂಧವೇನೂ?
ಕುಷ್ಠರೋಗಿಯೊಬ್ಬ “ಬ್ಯಾಂಕ್ ಆಫ್ ಯುಟೋಪಿಯಾ”ಗೆ ಹಣ ತುಂಬಲು ಬರುತ್ತಾನೆ. ಅವನ ಹಣ ಡಿಪಾಜಿಟ್ ಪಡೆಯುವ ವಿಷಯದ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳ ನಡುವೆ ಪರ ವಿರೋಧ ವಾದ ವಿವಾದಗಳು ನಡೆಯುತ್ತವೆ. ಈ ವಾದ ಹೇಗೆ ಕೊನೆಗೊಳ್ಳುತ್ತದೆ?
ಪ್ರೀತಿಸಿದ ವ್ಯಕ್ತಿಯೊಡನೆ ಮದುವೆಗೆ ಮೊದಲು ಸಲಿಗೆಯಿಂದ ಇರಬೇಕೆ ಬೇಡವೆ ಎಂಬ ದ್ವಂದ್ವಕ್ಕೆ ಸಿಲುಕಿರುವ ಸಾವಿತ್ರಿಯ ಕತೆಯ ಮುಕ್ತಾಯ ಏನಾಯ್ತು?
ಗಂಡನನ್ನು ಕಳೆದುಕೊಂಡ ರಾಜೇಶ್ವರಿ, ನಾಲ್ಕು ದಿನಗಳಿಂದ ಹೊಟ್ಟೆಗಿಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದ ತನ್ನ ಮಗುವಿನ ಹೊಟ್ಟೆ ತುಂಬಿಸಲು ಕಂಡು ಕೊಂಡ ದಾರಿ ಯಾವುದು?
ಇಂತಹ ಒಂಬತ್ತು ವಿಶಿಷ್ಟ ಕಥಾವಸ್ತುಗಳನ್ನು ಒಳಗೊಂಡಿರುವ, ಸಣ್ಣ ಕತೆಗಳು ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಕಾದಂಬರಿಗಳಲ್ಲಿರುವಂತಹ ರೋಚಕತೆಯೇ ಈ ಸಣ್ಣ ಕತೆಗಳ ಬರಹದ ಶೈಲಿಯಲ್ಲೂ ಕಂಡು ಬರುತ್ತದೆ, ಹೆಜ್ಜೆ ಹೆಜ್ಜೆಗೂ ಇದು ಯಂಡಮೂರಿಯವರ ಶೈಲಿ ಎಂದು ಜ್ಞಾಪಿಸುತ್ತದೆ.
