ಹೃದಯ ಸಮುದ್ರ / Hrudaya Samudra

Author: Dr Vamana Bendre

Pages: 80

Edition: 2007

Book Size: 1/8th Demmy

Binding: Paper Back

Publisher: Da. Ra Bendre Samshodhana Samsthe

Specification

Original price was: ₹60.Current price is: ₹54.

In stock

Description

ಹೃದಯ ಸಮುದ್ರ / Hrudaya Samudra – ಬೇಂದ್ರೆಯವರ ’ಗಂಗಾವತರಣ’ದಲ್ಲಿ ಒಟ್ಟು 50 ಕವಿತೆಗಳಿವೆ. ಅವುಗಳನ್ನು ಪ್ರಾರ್ಥನೆ ಮತ್ತು ಸ್ತೋತ್ರಗಳು, ಕೌಟುಂಬಿಕ ಭಾವಗೀತೆಗಳು, ಗಣ್ಯವ್ಯಕ್ತಿ ಗೀತೆಗಳು, ದೇಶ, ಸಮಾಜ, ಪ್ರೇಮ, ಸತ್ವಸೃಷ್ಟಿ, ಅನುಭಾವ ಗೀತೆಗಳು ಎಂದು ವರ್ಗೀಕರಿಸಿದ್ದಾರೆ. ಪ್ರಾರ್ಥನೆ ಮತ್ತು ಸ್ತೋತ್ರಗಳಲ್ಲಿ ಗಂಗಾಷ್ಟಕ ಮತ್ತು ಗಂಗಾವತರಣ ಪದ್ಯವಿದೆ. ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ. ಲೇಸೆ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತಿರಲಿ. ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು. ಲೇಸನುಂಡು,ಲೇಸುಸಿರಿ,ಇಲ್ಲಿರಲಿ ಲೇಸೆ ಮೈಯ ಪಡೆದು ಎಂದು ಪ್ರಾರ್ಥಿಸುತ್ತಾರೆ. ಬಾರೋ ಸಾಧನಕೇರಿಗೆ, ಫಜಾರಗಟ್ಟಿ ಮುಟ್ಟೋಣ ಬಾ, ಅಂಬಿಕಾತನಯದತ್ತ ಕವಿತೆಗಳು ಕೌಟುಂಬಿಕ ಭಾವಗೀತೆಗಳಾಗಿದ್ದರೆ ಬೆಳಗರೆ ಜಾನಕಮ್ಮನವರ ಕುರಿತ ’ತಂಗಿ ಜಾನಕಮ್ಮ’, ಬಿ.ಎಂ.ಶ್ರೀಯವರ ಕುರಿತ ಸಂಭಾವನೆ, ಪಂಪನಿಗೆ, ಬುದ್ದ ಕವಿತೆಗಳು ಗಣ್ಯವ್ಯಕ್ತಿ ಗೀತಗಳಾಗಿವೆ. ಒಂದೇ ಕರ್ನಾಟಕ , ಅನ್ನಯಜ್ಞ ಪ್ರಮುಖ ಕವಿತೆಗಳು ದೇಶ ಸಮಾಜ ಭಾಗದಲ್ಲಿವೆ. ಗಮ ಗಮಾಡಸ್ತಾವ ಮಲ್ಲಿಗೆ, ತಾಜಮಹಲ ಕವಿತೆಗಳು ’ಪ್ರೇಮ’ ಭಾಗದಲ್ಲಿದ್ದರೆ, ’ಬದುಕು ಮಾಯೆಯ ಮಾಟ ಮತ್ತು ಬಹು ಚರ್ಚಿತ ’ಜೋಗಿ’ ಕವಿತೆಗಳು ಸತ್ವಸೃಷ್ಟಿ ಭಾಗಗಳಲ್ಲಿವೆ. ಅನುಭಾವ ಗೀತೆಗಳ ಭಾಗದಲ್ಲಿ ಏಲಾಗೀತೆ, ಸರಸ್ವತಿ ಸೂಕ್ತ, ಅಗ್ನಿಸೂಕ್ತಗಳಿವೆ. ’ನಿಜದಲ್ಲಿ ಒಲವಿರಲಿ, ಚೆಲುವಿನಲೆ ನಲುವಿರಲಿ, ಒಳತಿನಲೆ ಒಲವಿರಲಿ ಜೀವಗಳೆಯಾ’ ಎನ್ನುವ ಕವಿ ’ಈ ನಾನು ಆ ನೀನು ಒಂದೇ ತಾನಿನ ತಾನು ತಾಳಲಯ ರಾಗಗಳ ಸಹಜ ಬರಲಿ’ ಎಂದು ಹಾಡಬಲ್ಲರು. ’ಅಂತರಂಗದ ಮೃದಂಗ ಅಂತು ತೋಮ್ ತನನ’ ಎಂದು ಆರಂಭವಾಗುವ ’ಕಣ್ಣ ಕಾಣಿಕೆ’ ಕವಿತೆಯು ’ಕತ್ತಲಲ್ಲೆ ಬೆಳಕು ಮಿಂಚಿ ಪಡೆದಿತೇಳು ಬಣ್ಣ ಮೂಕ ಮೌನ ತೂಕ ಮೀರಿ ದನಿಯ ಹುಟ್ಟಿ ಸಣ್ಣ ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ’ ಎಂದು ಹಾಡಿದ್ದಾರೆ. 1951ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ’ಗಂಗಾವತರಣ’ ಸಂಕಲನದಲ್ಲಿ 1944ರ ಮೊದಲಿನ ಕವಿತೆಗಳಿವೆ. ಪ್ರೊ ಆರ್‌.ಜಿ.ಕುಲಕರ್ಣಿಯವರು ’ಜೋಗಿಯ ನಾದಧ್ವನಿ’ ಎಂಬ ಪುಸ್ತಕದಲ್ಲಿ ’ಗಂಗಾವತರಣ ನಾದ ಮಾಧುರ್ಯ, ಬಾರೋ ಸಾಧನಕೇರಿಯಲ್ಲಿಯ ಕವಿಯ ವಾಸಸ್ಥಾನದ ವರ್ಣನೆ, ಧ್ವನಿ ಮುದ್ರಣಗೊಂಡ ಒಂದೇ ಕರ್ನಾಟಕ ಒಂದೇ, ಅನ್ನ ಯಜ್ಞದಲ್ಲಿನ ಅನ್ನದ ಬೆಲೆ- ನೆಲೆ, ಗಮ ಗಮಾಡಸ್ತಾವ ಮಲ್ಲಿಗೆ ಎಂಬುದರಲ್ಲಿ ನಾಟಕೀಯತೆ, ಜೋಗಿಯಲ್ಲಿಯ ಅದ್ಭುತ ನಿಗೂಢತೆ, ತುಂಬಿ ಪದ್ಯದಲ್ಲಿಯ ಛಂದಸ್ಸು ಮೆಚ್ಚುಗೆಗೆ ಪಾತ್ರವಾಗುತ್ತವೆ’ ಎಂದು ಹೇಳಿದ್ದಾರೆ.