ಹೇಳಿ ಹೋಗು ಕಾರಣ / Heli Hogu Karana
Author: Ravi Belagere
Pages:339
Edition: 2025
Book Size: 1/8th Demmy
Binding: Paper Back
Publisher: Bhavana Prakashana
Description
ಹೇಳಿ ಹೋಗು ಕಾರಣ / Heali Hogu Karana – ರವಿ ಬೆಳಗೆರೆ ಅವರ “ಹೇಳಿ ಹೋಗು ಕಾರಣ” ಕಾದಂಬರಿಯು ಪ್ರೀತಿ, ಕನಸುಗಳು ಮತ್ತು ಜೀವನದಲ್ಲಿನ ಮಾರ್ಪಾಡುಗಳನ್ನು ಕುರಿತಾದ ಒಂದು ಕಥೆಯಾಗಿದೆ. ಪ್ರೀತಿಸಿದ ಹುಡುಗನೊಬ್ಬನಿಗೆ ಹುಡುಗಿ ಬೇರೊಬ್ಬರೊಂದಿಗೆ ಮದುವೆಯಾದಾಗ ಅವನ ಜೀವನದಲ್ಲಿ ಉಂಟಾಗುವ ತಲ್ಲಣಗಳನ್ನು ಈ ಪುಸ್ತಕವು ವಿವರಿಸುತ್ತದೆ. ನಿಜವಾದ ಪ್ರೀತಿ, ಮೋಸ, ಕನಸುಗಳು ನನಸಾಗುವ ಮತ್ತು ಸತ್ಯ ಸುಳ್ಳಾಗುವ ಸಂಧರ್ಭಗಳ ಮಿಶ್ರಣ ಈ ಕಾದಂಬರಿಯಲ್ಲಿದೆ. ಉತ್ಕಟ ಪ್ರೇಮ ಕಥೆಯನ್ನು ಒಳಗೊಂಡಿದೆ. ಹಿಮವಂತ ಎಂಬ ನಾಯಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎಂಬುದನ್ನು ಇದು ವಿವರಿಸುತ್ತದೆ.
ಮುಖ್ಯ ಪಾತ್ರಗಳಾದ ಹಿಮವಂತ, ಪ್ರಾರ್ಥನಾ ಮತ್ತು ದೇಬಶಿಶು ಬಂಡೋಪಾಧ್ಯಾಯರ ಪಾತ್ರಗಳು ಓದುಗರ ಜೀವನಕ್ಕೆ ಸಂಬಂಧಿಸಿದ್ದವೆಂದು ಭಾಸವಾಗುವಂತೆ ಬರೆಯಲಾಗಿದೆ. ಈ ಕಾದಂಬರಿಯು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದಾಗ ಅಪಾರ ಜನಮನ್ನಣೆ ಗಳಿಸಿತ್ತು. ತನ್ನ ಪ್ರೀತಿ, ಕನಸು ಮತ್ತು ಜೀವನವನ್ನು ತನ್ನ ಪ್ರೇಯಸಿಗಾಗಿ ಮುಡಿಪಾಗಿಟ್ಟ ಒಬ್ಬ ಪ್ರೇಮಿಗೆ, ಆ ಹುಡುಗಿ ಬೇರೊಬ್ಬನ ಜೊತೆ ಮದುವೆಯಾದಾಗ ಅವನ ಜೀವನದಲ್ಲಿ ಉಂಟಾಗುವ ಆಳವಾದ ಬದಲಾವಣೆಗಳು ಮತ್ತು ಭಾವನಾತ್ಮಕ ಏರಿಳಿತಗಳನ್ನು ಈ ಪುಸ್ತಕವು ಅತ್ಯಂತ ತೀವ್ರವಾಗಿ ಚಿತ್ರಿಸುತ್ತದೆ.
