C/o ಚಾರ್ಮಾಡಿ / C/o Charmadi

Author:Sachin Therthahalli

Pages:111

Edition: 2022

Book Size: 1/8th Demmy

Binding: Paper Back

Publisher:Sapna Book House

Original price was: ₹110.Current price is: ₹99.

In stock

Description

C/o ಚಾರ್ಮಾಡಿ / C/o Charmadi – ಪುಸ್ತಕವನ್ನು ಓದಲು ಕೈಗೆತ್ತಿಕೊಂಡಿದ್ದೆ. ಮೈಸೂರಿಗೆ ಯಾವುದೋ ಕೆಲಸ ನಿಮಿತ್ತ ತೆರಳಿದ ನನಗೆ ಶೂನ್ಯ ಸಮಯದಲ್ಲಿ ಸಚಿನ್ ತೀರ್ಥಹಳ್ಳಿ ಅವರು ಬರೆದಿರುವ c/o ಚಾರ್ಮಾಡಿ ಜೊತೆಯಾಗಿತ್ತು .

ಕಥೆಯೊಂದು ಶುರುವಾಗುವ ಮೊದಲು, ಎಂಬುವ ಕೃತೀಯ ಬಗೆಗಿನ ಸಣ್ಣ ಪರಿಚಯದಿಂದ ಅಧ್ಯಾಯಗಳು ಶುರುವಾದವು.

ಕೆಲವು ಅಧ್ಯಾಯಗಳನ್ನು ಓದುವವರೆಗೂ , ಲೇಖಕರ ಅನುಭವವನ್ನು ಎಳೆ ಎಳೆಯಾಗಿ ವಿವರಿಸುತ್ತಿರುವರೆಂದು ಇನ್ನೂ ಸ್ವಲ್ಪದರಲ್ಲೆ, ಕಥೆ ಶುರುವಾಗುವುದೆಂದು ನಂಬಿದೆನು.

ಅಥರ್ವ ಹೇಳಿದ ಪ್ರೇಮ ಕಥೆಗಳಿಂದ, ಚಾರ್ಮಾಡಿ ನೋಡಿದ ಕಥಾನಾಯಕನ ಬೆರಗಿನಿಂದ ಕಥೆಯೊಂದು ಶುರು ಮಾಡುವಿರೆಂದು ಅಂದುಕೊಂಡಿದ್ದ ನನಗೆ ,ಕಥೆಯೊಂದು ಶುರುವಾಗಿ ಅಧ್ಯಾಯ ಮೂರಕ್ಕೆ ಹೋಗಿದ್ದು ಗೊತ್ತೇ ಆಗಲಿಲ್ಲ.

ತೀರ್ಥಹಳ್ಳಿಯ ಸುತ್ತಮುತ್ತಲಿನ ವನಸಿರಿ ವೈಯಾರಗಳನ್ನು, ಹಸಿರನ್ನು ಹೊದ್ದ ಚಾರ್ಮಾಡಿಯ ಗಿರಿ ಸಾಲಿನ ಯವ್ವನವನ್ನು ಯುವತಿಯ ಪ್ರೇಮದೊಂದಿಗೆ ದಾರ ಪೋಣಿಸಿ ಹೆಣೆದಿರುವ ಕಥೆಯೋಳಗೊಂದು ಕಥೆಯನ್ನು ಕಟ್ಟಿ ಕೊನೆಯವರೆಗೂ ಕುತೂಹಲದಿಂದ ಪುಟ ತಿರುಗುವಂತೆ ಓದಿಸಿಕೊಂಡು ಹೋಗುವಂತೆ ಯೋಜಿಸಲಾದ ಚಾರ್ಮಾಡಿ , ಕುತೂಹಲವನ್ನು ಕೊನೆಯವರೆಗೂ ಬಿಟ್ಟುಕೊಡಲಿಲ್ಲ.

ಅಲೆಕಾನ್ ವೆನ್ನೆಲಾಳ ಪ್ರೀತಿಯ ಪರಿತಾಪಕ್ಕೆ ಸಿಕ್ಕಿ, ಅನುಭವಿಸುವ ಹೃದಯದ ತಳಮಳಗಳಿಗೆ ಹಳ್ಳಿ ಸೊಗಡಿನ ಲೇಪಕೊಟ್ಟು, ಪಟ್ಟಣದ ಪ್ರೇಮ ಜ್ವರದ ಶಾಖ ಕೊಟ್ಟು, ವಿರಹದ ಬೇಗೆಯಲ್ಲಿ ಕಾಯಿಸಿ, ಅಯ್ಯೋ ಎನ್ನುವಷ್ಟು ಓದುಗರಿಗೂ, ಹೃದಯ ಚುರುಕ್ ಎನ್ನುವಂತೆ ಮಾಡಿಬಿಟ್ಟಿರುವಿರಿ.