ನನ್ನ ಮಟ್ಟಿಗೆ / Nanna Mattige
ನನ್ನ ಮಟ್ಟಿಗೆ / Nanna Mattige Original price was: ₹95.Current price is: ₹85.
Back to products
ರಾಗ-ರಂಗು / Raaga Rangu
ರಾಗ-ರಂಗು / Raaga Rangu Original price was: ₹95.Current price is: ₹85.

LTTE ಮೂರ್ತಿ Calling… / LTTE Murthy Calling

Author: A Venkatesh Murthy

Pages:96

Edition: 2022

Book Size: 1/8th Demmy

Binding: Paper Back

Publisher: Sawanna Publication

 

Specification

Original price was: ₹120.Current price is: ₹108.

In stock

Description

LTTE ಮೂರ್ತಿ Calling… / LTTE Murthy Calling -“Ltte Murthy Calling” ಎಂಬ ಕನ್ನಡ ಪುಸ್ತಕವನ್ನು ಎ. ವೆಂಕಟೇಶ್ ಮೂರ್ತಿ ಮತ್ತು ಶಿವಕುಮಾರ್ ಮವಲಿ ಅವರು ಬರೆದಿದ್ದಾರೆ. ಈ ಪುಸ್ತಕವು 1991ರಲ್ಲಿ ಬೆಂಗಳೂರಿನ ಒಂದು ಸಾಮಾನ್ಯ ಕುಟುಂಬದಲ್ಲಿ ಸಂಭವಿಸಿದ ದೊಡ್ಡ ದುರ್ಘಟನೆಯ ಕುರಿತಾದ ಒಂದು ಕಾದಂಬರಿಯಾಗಿದ್ದು, ಇದು ನಿಜ ಘಟನೆಗಳನ್ನು ಆಧರಿಸಿದೆ. ಒಂದು ಸಾಮಾನ್ಯ ಕುಟುಂಬದ ಮೇಲೆ ದೊಡ್ಡ ದುರ್ಘಟನೆಯು ತಂದೊಡ್ಡಿದ ಆತಂಕ, ದಿಗಿಲು ಮತ್ತು ಅಸಹಾಯಕತೆಯನ್ನು ಈ ಪುಸ್ತಕ ವಿವರಿಸುತ್ತದೆ.

ಒಂದು ತಿಂಗಳ ಹಿಂದೆ ಜಮೀಲ್ ಸರ್ ಫೋನ್ ಮಾಡಿದ್ದರು. ಸರ್ ಫೋನ್ ಮಾಡಿದರೆ ಹೊಸ ಪುಸ್ತಕದ ಬಗ್ಗೆ ಮಾತಾಡುತ್ತಾರೆ. ಹೊಸ ಐಡಿಯಾ, ಹೊಸ ಕವರ್ ಪೇಜ್ ಇಂಥದ್ದೇ ಇರುತ್ತದೆ. ಮೆಲ್ಲಗೆ, “ನಿಮ್ಮ ಪುಸ್ತಕದ ಕಥೆ ಏನೂ?” ಎಂದು ಸಹ ಕೇಳಿ ಎಚ್ಚರಿಸುತ್ತಾರೆ. ಇಂಥದ್ದೇ ಒಂದು ಸುಸಂದರ್ಭದಲ್ಲಿ ಹೊಸ ಪುಸ್ತಕದ ಟೈಟಲ್ ಎಂದು ಹೇಳಿದರು. ನಾನು ಒಮ್ಮೆ ಬೆಚ್ಚಿಬಿದ್ದೆ. “ಇದೇನ್ ಸಾರ್, ಇದ್ಯಾರು ಸರ್” ಎಂದು ಕೇಳುತ್ತಿದ್ದೆ. “ಸೀಕ್ರೆಟ್ ಮೇಡಮ್” ಎಂದು ನಕ್ಕುಬಿಟ್ಟರು. ಆಮೇಲೆ ಜಮೀಲ್ ಸರ್ ಗೆ ಪುಸ್ತಕ ರತ್ನ ಪ್ರಶಸ್ತಿ ಬಂದ ಸಮಾರಂಭದಲ್ಲಿ ಶಿವಕುಮಾರ್ ಮಾವಲಿಯವರು ಮಾತಾಡುತ್ತಾ , “ನಾಳೆ ನಾನು ನಿಮ್ಮ ಜಯನಗರಕ್ಕೆ ಬರ್ತೀನಿ, ಜಮೀಲ್ ಸರ್ ಆಫೀಸಲ್ಲಿ ರೀಡಿಂಗ್ ಇದೆ” ಎಂದು ಹೇಳಿದಾಗ, “ಓಹ್ ಈ LTTE Murthy calling ಇವರ ಪುಸ್ತಕವೇ” ಎಂದು ತಾಳೆ ಹಾಕಿಕೊಂಡೆ. ಪೊಲೀಸ್, ತನಿಖೆ ಎಂದೆಲ್ಲಾ ಅಷ್ಟೇ ಜಮೀಲ್ ಸರ್ ಹೇಳಿದ್ದು, ನಾನು ಸ್ವಲ್ಪ ತಲೆ ಓಡಿಸಿ ಯಾರು ಬರೆದಿರಬಹುದು ಎಂದು ಯೋಚಿಸುತ್ತಿದ್ದೆ.